ಕುಂಬಳೆ: ಮುಜುಂಗಾವಿನ ಶ್ರೀ ಭಾರತೀ ವಿದ್ಯಾಪೀಠದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕೆಲವಷ್ಟು ಮಕ್ಕಳು ಹಾಗೂ ಅಧ್ಯಾಪಕ ವೃಂದದವರ ಕೂಡುವಿಕೆಯಲ್ಲಿ ಆಚರಿಸಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ À ಎಸ್.ಎನ್ ರಾವ್, ಮುನ್ನಿಪ್ಪಾಡಿಯವರು; ರಾಷ್ಟ್ರ ದ್ವಜಾರೋಹಣವನ್ನು ಮಾಡಿ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿದರು. ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುವಂತಾಗಲಿ ಎಂದು ಪ್ರಾರ್ಥಿಸಿದರು. ಶಾಲಾ ಕೋಶಾಧಿಕಾರಿ ಚಂದ್ರಶೇಖರ ಭಟ್ ಎಯ್ಯೂರು,À ಶ್ಯಾಂಭಟ್ ದರ್ಭೆಮಾರ್ಗ, ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ ಸಹಿತ ಅಧ್ಯಾಪಕ ವೃಂದ ಕೆಲವರು ಉಪಸ್ಥಿತರಿದ್ದರು.





