ನವದೆಹಲಿ: ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಸ್ವ-ಸಹಾಯ ಗುಂಪುಗಳ (ಎಸ್.ಎಚ್.ಜಿ.) ಮಹಿಳಾ ಸದಸ್ಯರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸಂವಾದ ನಡೆಸಿದರು. ಪ್ರಧಾನ ಮಂತ್ರಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು.
ಮಧ್ಯಪ್ರದೇಶದ ಸ್ವಸಹಾಯ ಗುಂಪಿನ ಸದಸ್ಯರಾದ ಚಂಪಾ ಸಿಂಗ್ ಅವರಿಗೆ ಪ್ರಧಾನಮಂತ್ರಿಯವರು, ಮಹಿಳಾ ಪಡೆಗಳು ತಮ್ಮ ಸಮರ್ಪಿತ ಕೆಲಸಕ್ಕಾಗಿ ಪ್ರಾಮಾಣಿಕ ಮೆಚ್ಚುಗೆಯನ್ನು ನೀಡುವುದು ದೇಶದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಿದೆ ಎಂದು ಹೇಳಿದರು. ಸಾವಯವ ಕೃಷಿ ಕುರಿತು ಆನ್‍ಲೈನ್ ಅಭಿಯಾನವನ್ನು ಆಯೋಜಿಸುವಂತೆ ಅವರು ಚಂಪಾ ಸಿಂಗ್‍ಗೆ ಸೂಚನೆ ನೀಡಿದರು.
ಮಹಿಳಾ ಸಬಲೀಕರಣದ ಮೂಲಕ ಆಕೆಯ ಕುಟುಂಬ ಮಾತ್ರವಲ್ಲದೆ ದೇಶವೂ ಉನ್ನತ ಮಟ್ಟಕ್ಕೆ ಏರುತ್ತದೆ. ಮಹಿಳಾ ಸ್ವಸಹಾಯ ಗುಂಪಿನ ಉನ್ನತಿಗೆ ಸರ್ಕಾರವು ತನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಮತ್ತು ಮಹಿಳೆಯರಿಗಾಗಿ ಬ್ಯಾಂಕ್ ಖಾತೆಗಳನ್ನು ತೆರೆಯುತ್ತದೆ. ಎಸ್.ಎಚ್.ಜಿ ಗಳಿಗೆ ಯಾವುದೇ ಜಾಮೀನುಗಳಿಲ್ಲದೆ ಸಾಲಗಳನ್ನು ನೀಡುತ್ತದೆ ಎಂದು ಅವರು ಹೇಳಿದರು.
ದೇಶದ ವಿವಿಧ ಭಾಗಗಳಿಂದ ಭಾಗವಹಿಸಿದ ಮಹಿಳೆಯರ ಯಶೋಗಾಥೆಗಳ ಸಂಗ್ರಹದ ಜೊತೆಗೆ, ಕೃಷಿ ಜೀವನೋಪಾಯದ ಸಾಮಾನ್ಯ ಪರಿಕಲ್ಪನೆಯ ಕೈಪಿಡಿಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದ ಭಾಗವಾಗಿ, ಸುಮಾರು 4 ಲಕ್ಷ ಸ್ವಸಹಾಯ ಸಂಘಗಳಿಗೆ `1,625 ಕೋಟಿ ಆರ್ಥಿಕ ನೆರವು ಒದಗಿಸಲಾಗಿದೆ. ಇದರ ಜೊತೆಗೆ, ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದ ಅಡಿಯಲ್ಲಿ ಪ್ರಧಾನ ಮಂತ್ರಿ ಮೈಕ್ರೋ ಫುಡ್ ಪೆÇ್ರಸೆಸಿಂಗ್ ಎಂಟರ್‍ಪ್ರೈಸ್ () ನ ಔಪಚಾರಿಕತೆಯ ಭಾಗವಾಗಿ 7,500 Sಊಉ ಗಳಿಗೆ ಆರಂಭಿಕ ಬಂಡವಾಳವನ್ನು 25 ಕೋಟಿ ರೂ. 75 ರೈತರ ಉತ್ಪಾದಕರ ಸಂಘಗಳಿಗೆ (ಎಎಫ್‍ಪಿಒ) `4.13 ಕೋಟಿ ಮೊತ್ತವನ್ನು ಒದಗಿಸಲಾಗಿದೆ.


