HEALTH TIPS

ಏಶ್ಯನ್‌ ದಾಖಲೆ ಸ್ಥಾಪಿಸಿದರೂ ಫೈನಲ್‌ಗೆ ಏರದ ರಿಲೇ ಟೀಮ್‌

        ಟೋಕಿಯೊ: ಭಾರತದ ಪುರುಷರ ರಿಲೇ ತಂಡ ಏಶ್ಯನ್‌ ದಾಖಲೆ ಸ್ಥಾಪಿಸಿಯೂ ಟೋಕಿಯೊ ಒಲಿಂಪಿಕ್ಸ್‌ ಫೈನಲ್‌ಗೆ ತೇರ್ಗಡೆಯಾಗಲು ವಿಫ‌ಲವಾಗಿದೆ.

         ಮುಹಮ್ಮದ್‌ ಅನಾಸ್‌ ಯಾಹಿಯ, ತೋಮ್‌ ನೋ ನಿರ್ಮಲ್‌, ರಾಜೀವ್‌ ಅರೋಕಿಯಾ ಮತ್ತು ಅಮೋಜ್‌ ಜೆಕೋಬ್‌ ಅವರನ್ನೊಳಗೊಂಡ ಭಾರತದ 4×400 ಮೀ. ರಿಲೇ ತಂಡ ದ್ವಿತೀಯ ಹೀಟ್ಸ್‌ನಲ್ಲಿ 3 ನಿಮಿಷ, 25 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನಿಯಾಯಿತು. ಒಟ್ಟಾರೆಯಾಗಿ 9ನೇ ಸ್ಥಾನಕ್ಕೆ ಕುಸಿದು 8 ತಂಡಗಳ ಫೈನಲ್‌ ಸ್ಪರ್ಧೆಯಿಂದ ದೂರ ಉಳಿಯಬೇಕಾಯಿತು.

          ಭಾರತದ 3 ನಿಮಿಷ, 25 ಸೆಕೆಂಡ್ಸ್‌ಗಳ ಈ ಸಾಧನೆ ಏಶ್ಯನ್‌ ದಾಖಲೆ ಎನಿಸಿತು. ಹಿಂದಿನ ದಾಖಲೆ ಕತಾರ್‌ ಹೆಸರಲ್ಲಿತ್ತು (3 ನಿಮಿಷ, 56 ಸೆಕೆಂಡ್ಸ್‌). ಇದು 2018ರ ಏಶ್ಯನ್‌ ಗೇಮ್ಸ್‌ನಲ್ಲಿ ದಾಖಲಾಗಿತ್ತು.

                  50 ಕಿ.ಮೀ. ವಾಕ್‌: ಗುರಿ ಪೂರೈಸದ ಗುರುಪ್ರೀತ್‌

         ಭಾರತದ ವಾಕ್‌ ರೇಸರ್‌ ಗುರುಪ್ರೀತ್‌ ಸಿಂಗ್‌ 50 ಕಿ.ಮೀ. ಗುರಿ ಪೂರೈಸದೆ ಅರ್ಧದಲ್ಲೇ ಹಿಂದೆ ಸರಿದಿದ್ದಾರೆ. ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಗುರುಪ್ರೀತ್‌ ಸಿಂಗ್‌ 35 ಕಿ.ಮೀ. ( 2 ಗಂಟೆ 55 ನಿಮಿಷ) ಓಟವನ್ನಷ್ಟೇ ಕ್ರಮಿಸಿ 51ನೇ ಸ್ಥಾನಿಯಾಗಿ ಕೂಟದಿಂದ ನಿರ್ಗಮಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries