HEALTH TIPS

ಕೋವಿಡ್ ನಿಂದ ಗುಣಮುಖನಾದ ವ್ಯಕ್ತಿಯ ಮೆದುಳಿನಲ್ಲಿ ಬಿಳಿ ಫಂಗಸ್ ಪತ್ತೆ

            ಹೊಸದಿಲ್ಲಿ: ಕೋವಿಡ್ ಸೋಂಕಿನಿಂದ ಗುಣಮುಖನಾದ ವ್ಯಕ್ತಿಯೋರ್ವರ ಮೆದುಳಿನಲ್ಲಿ ಬಿಳಿ ಪಂಗಸ್ ಪತ್ತೆಯಾದ ಪ್ರಕರಣ ಹೈದರಾಬಾದ್ ನಿಂದ ವರದಿಯಾಗಿದೆ. ಈ ವ್ಯಕ್ತಿ ಕಳೆದ ವರ್ಷ ಮೇಯಲ್ಲಿ ಕೋವಿಡ್ ನಿಂದ ಗುಣಮುಖರಾಗಿದ್ದರು. ಅವರಿಗೆ ಅಗಾಂಗಳಲ್ಲಿ ನಿಶ್ಯಕ್ತಿ ಹಾಗೂ ಮಾತನಾಡಲು ಸಮಸ್ಯೆ ಕಾಣಿಸಿಕೊಂಡಿತ್ತು. ಅವರ ಮೆದುಳಿನ ಸ್ಕಾನಿಂಗ್ ನಡೆಸಿದಾಗ ಯಾವುದೋ ವಸ್ತು ಹೆಪ್ಪುಗಟ್ಟಿರುವಂತೆ ಕಂಡು ಬಂದಿತ್ತು. ಔಷಧ ತೆಗೆದುಕೊಂಡರೂ ಅದು ವಾಸಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅವರಿಗೆ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಈ ಸಂದರ್ಭ ಬಿಳಿ ಫಂಗಸ್ ರೂಪುಗೊಂಡಿರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.

            ಮೆದುಳಿನಲ್ಲಿ ಬಿಳಿ ಫಂಗಸ್ ಪತ್ತೆಯಾಗಿರುವ ಅಪರೂಪದ ಪ್ರಕರಣ ಇದಾಗಿದೆ. ಕೋವಿಡ್ ಸೋಂಕಿನಿಂದ ಗುಣಮುಖರಾದ ನಂತರ ಇದು ಕಂಡು ಬಂದಿದೆ. ಸಾಮಾನ್ಯವಾಗಿ ಕೋವಿಡ್ ರೋಗಿಗೆ ಸಕ್ಕರೆ ಖಾಯಿಲೆ ಇದ್ದರೆ ಮಾತ್ರ ಫಂಗಸ್ ಸೋಂಕು ಉಂಟಾತ್ತದೆ. ಈ ವ್ಯಕ್ತಿಗೆ ಬಿಳಿ ಫಂಗಸ್ ಕಪ್ಪು ಫಂಗಸ್ನಂತೆ ಮೂಗಿನ ಮೂಲಕ ಮೆದುಳಿಗೆ ಪ್ರವೇಶಿಸಿಲ್ಲ ಎಂದು ಸನ್ಶೈನ್ ಆಸ್ಪತ್ರೆಯ ಹಿರಿಯ ನರರೋಗ ತಜ್ಞ ಡಾ. ಪಿ. ರಂಗಧಾಮ ಅವರು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries