HEALTH TIPS

ಆಫ್ಘನ್ ಬಿಕ್ಕಟ್ಟು: ಭಾರತೀಯರ ಸುರಕ್ಷತೆಗೆ ಕೇಂದ್ರ ಸರ್ಕಾರದಿಂದ ಕ್ರಮ

              ಕಾಬೂಲ್ಅಫ್ಗಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಬಿಕ್ಕಟ್ಟು ವಿಚಾರಕ್ಕೆ ಸಂಬಂಧಿಸಿದಂತೆ ಕಾಬುಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗಳನ್ನು ಭಾರತಕ್ಕೆ ಕರೆಸಿಕೊಳ್ಳಲು ಭಾರತ ಗಂಭೀರ ಚಿಂತನೆ ನಡೆಸಿದೆ.

        ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿರುವ ಭಾರತ ಸರ್ಕಾರವು ಕಾಬೂಲ್‌ನಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿನ ತನ್ನ ಸಿಬ್ಬಂದಿಯನ್ನು ಸ್ಥಳಾಂತರಿಸುವುದು ಮತ್ತು ದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಒಳಗೊಂಡಂತೆ ಎಲ್ಲಾ ಆಕಸ್ಮಿಕಗಳು ಮತ್ತು ಘಟನೆಗಳ ಕುರಿತು ಯೋಜನೆ ಸಿದ್ಧಪಡಿಸಿದೆ, ಈಗಾಗಲೇ ಏರ್ ಇಂಡಿಯಾ ವಿಮಾನದ ಮೂಲಕ ಭಾರತೀಯರನ್ನು ರಕ್ಷಿಸುವ ಕಾರ್ಯವಾಗಿದ್ದು, ಮೊದಲ ಹಂತದ 129 ಜನರ ತಂಡ ಭಾರತಕ್ಕೆ ಬಂದಿಳಿದಿದೆ. ಇದಲ್ಲದೆ ಭಾರತೀಯ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ ಮಿಲಿಟರಿ ಟ್ರಾನ್ಸ್‌ಪೋರ್ಟ್ ವಿಮಾನಗಳನ್ನು ಸ್ಥಳಾಂತರಿಸುವ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸರ್ವಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

                              ಕಾಬುಲ್ ನಿಂದ ಭಾರತಕ್ಕೆ
        ತಾಲಿಬಾನ್ ಉಗ್ರರ ಹಿಂಸಾಚಾರದ ಬೆನ್ನಲ್ಲೇ ಇತ್ತ ಭಾರತ ಸರ್ಕಾರ ಏರ್ ಇಂಡಿಯಾ ವಿಮಾನದಲ್ಲಿ ಆಫ್ಘಾನಿಸ್ತಾನದಲ್ಲಿ ಸಂಕಷ್ಟಕ್ಕೆ ಸುಲುಕಿದ್ದ 129 ಮಂದಿ ಭಾರತೀಯರನ್ನು ಭಾರತಕ್ಕೆ ಕರೆತರಲಾಗಿದೆ.

            ಈಗಾಗಲೇ ತಾಲಿಬಾನ್ ಬಂಡುಕೋರರು ರಾಜಧಾನಿ ಕಾಬುಲ್ ಸುತ್ತುವರೆದಿದ್ದು, ಅಧ್ಯಕ್ಷೀಯ ಭವನ ಕೂಡ ತಮ್ಮ ವಶಕ್ಕೆ ಸೇರಿದೆ ಎಂದು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅಧ್ಯಕ್ಷರ ನಿವಾಸ ನಮ್ಮ ನಿಯಂತ್ರಣದಲ್ಲಿದೆ ಎಂದು ಕಾಬೂಲ್‌ನಲ್ಲಿರುವ ತಾಲಿಬಾನ್‌ನ ಇಬ್ಬರು ಹಿರಿಯ ಕಮಾಂಡರ್‌ಗಳು ತಿಳಿಸಿದ್ದಾರೆ. ಆಫ್ಘಾನಿಸ್ತಾನದ ಒಟ್ಟು 34 ಪ್ರಾಂತ್ಯಗಳ ಪೈಕಿ ಈಗಾಗಲೇ ತಾಲಿಬಾನ್ 25 ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ ರಾಜಧಾನಿ ಕಾಬುಲ್ ಗೂ ತಾಲಿಬಾನಿಗಳು ಮುತ್ತಿಗೆ ಹಾಕಿದ್ದು, ಕಾಬುಲ್ ಸುತ್ತಮುತ್ತಲ ಪ್ರದೇಶಗನ್ನು ವಶಕ್ಕೆ ಪಡೆದಿದೆ. ಇದೇ ಕಾರಣಕ್ಕಾಗಿ ತಾಲಿಬಾನಿಗಳು ಆಫ್ಘನ್ ಅಧಿಕಾರದ ಚುಕ್ಕಾಣಿ ಹಿಡಿಯಲು ಹವಣಿಸುತ್ತಿದ್ದಾರೆ.

         ಅಧ್ಯಕ್ಷ ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ ಕಮಾಂಡರ್‌ಗಳು ಈ ಹೇಳಿಕೆ ನೀಡಿರುವುದು ಆಫ್ಘನ್ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಆದರೆ, ತಾಲಿಬಾನ್‌ನ ಈ ಹೇಳಿಕೆ ಬಗ್ಗೆ ಅಫ್ಗಾನಿಸ್ತಾನ ಸರ್ಕಾರ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸರ್ಕಾರಿ ಅಧಿಕಾರಿಗಳು ತಕ್ಷಣ ಸಂಪರ್ಕಕ್ಕೆ ದೊರೆತಿಲ್ಲ.

                ಇದಕ್ಕೂ ಮುನ್ನ, ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖಿಸಿ 'ರಾಯಿಟರ್ಸ್' ವರದಿ ಮಾಡಿತ್ತು. ಈ ಕುರಿತು ಮಾಹಿತಿ ನೀಡಲು ಅಧ್ಯಕ್ಷರ ಕಚೇರಿ ನಿರಾಕರಿಸಿತ್ತು. ಭದ್ರತಾ ಕಾರಣಗಳಿಗಾಗಿ ಅಶ್ರಫ್ ಘನಿ ಅವರ ಕುರಿತಾದ ಮಾಹಿತಿ ನೀಡಲಾಗದು ಎಂದು ಕಚೇರಿ ಹೇಳಿತ್ತು.

                                   ತಜಕಿಸ್ತಾನಕ್ಕೆ ತೆರಳಿದ ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ
           ಅಧ್ಯಕ್ಷ ಅಶ್ರಫ್ ಘನಿ ಕಾಬೂಲ್‌ನಿಂದ ತಜಕಿಸ್ತಾನಕ್ಕೆ ತೆರಳಿದ್ದಾರೆ ಎಂದು ಅಫ್ಗಾನಿಸ್ತಾನದ ಆಂತರಿಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಅಧ್ಯಕ್ಷರ ಕಚೇರಿಯನ್ನು ಸಂಪರ್ಕಿಸಿದಾಗ, ಮಾಹಿತಿ ನೀಡಲು ನಿರಾಕರಿಸಿದೆ. ಭದ್ರತಾ ಕಾರಣಗಳಿಗಾಗಿ ಅಶ್ರಫ್ ಘನಿ ಅವರ ಕುರಿತಾದ ಮಾಹಿತಿ ನೀಡಲಾಗದು ಎಂದು ಕಚೇರಿ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries