ಕಾಸರಗೋಡು: ಇತರ ಜಿಲ್ಲೆಗಳಿಂದ ಕಾಸರಗೋಡು ಜಿಲ್ಲೆಗೆ ಆಗಮಿಸಿ, ಇಲ್ಲಿ ನೌಕರಿ ನಡೆಸುತ್ತಿರುವ ಮಂದಿಗೆ ಕೋವಿಡ್ ಪ್ರತಿರೋಧ ಲಸಿಕೆ ಸ್ವೀಕಾರಕ್ಕೆ ಸೌಲಭ್ಯ ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
ತಾವು ಕಾಸರಗೋಡು ಜಿಲ್ಲೆಯಲ್ಲಿ ನೌಕರಿ ನಡೆಸುತ್ತಿರುವುದಾಗಿ, ತಂಗಿರುವುದಾಗಿ ಖಚಿತಪಡಿಸುವ ದಾಖಲೆ ಪತ್ರ ಹಾಜರುಪಡಿಸಿ, ಆನ್ ಲೈನ್ ನೋಂದಣಿ ನಡೆಸಿ ವಾಕ್ಸಿನ್ ಸ್ವೀಕಾರ ಮಾಡಬಹುದು ಎಂದವರು ನುಡಿದರು.
ನೌಕರಿ ನಡೆಸುವ ಸಂಸ್ಥೆಯ ಮುಖ್ಯಸ್ಥರ ಪತ್ರವನ್ನೂ ಹಾಜರುಪಡಿಸಬಹುದಾಗಿದೆ. ಸದ್ರಿ ಶೇ 50 ಆನ್ ಲೈನ್ ಮೂಲಕ, ಶೇ 50 ಸ್ಪಾಟ್ ನೋಂದಣಿ ಮೂಲಕ ವಾಕ್ಸಿನ್ ಲಭ್ಯವಿದೆ. ಆನ್ ಲೈನ್ ಮೂಲಕ ತಾವಿರುವ ಪಂಚಾಯತ್ ನಲ್ಲಿ ಲಸಿಕೆ ಲಭ್ಯವಿರುವುದು. ಇದಕ್ಕಾಗಿ ಆಧಾರ್ ಕಾರ್ಡ್ ಯಾ ವಿಳಾಸ ಖಚಿತಪಡಿಸುವ ಇತರ ಯಾವುದೇ ದಾಖಲು ಹಾಜರುಪಡಿಸಿದರೆ ಸಾಕು ಎಂದು ಜಿಲ್ಲಾಧಿಕಾರಿ ಹೇಳಿದರು.

