HEALTH TIPS

ಓಣಂ ಸಂತೆ-ಕುಟುಂಬಶ್ರೀಯ 'ಕುಟುಂಬಿನಿ'ಓಣಂಕಿಟ್ ಮಾರುಕಟ್ಟೆಗೆ ಬಿಡುಗಡೆ

                                              

            ಕಾಸರಗೋಡು: ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ಕುಟುಂಬಶ್ರೀ ಕಾಸರಗೋಡು ಜಿಲ್ಲಾ ಘಟಕ ವಿಶೇಷ ಮಾರಾಟ ಮೇಳ ಆರಂಭಿಸಿದೆ. ಓಣಂ ಔತಣ(ಓಣ ಸದ್ಯ)ವನ್ನು ವಿವಿಧ ಖಾದ್ಯಗಳಿಂದ ಸಮೃದ್ಧಗೊಳಿಸುವ ನಿಟ್ಟಿನಲ್ಲಿ ಕುಟುಂಬಿನಿ ಎಂಬ ವಿಶೇಷ ಓಣಂ ಕಿಟ್‍ಗಳನ್ನೂ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

            ಚೆರ್ವತ್ತೂರಿನಲ್ಲಿ ಆರಂಭಿಸಲಾದ ಜಿಲ್ಲಾಮಟ್ಟದ ಓಣಂ ಮಾರಾಟಮಳಿಗೆಯನ್ನು ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಚೆರ್ವತ್ತೂರು ಗ್ರಾಪಂ ಅಧ್ಯಕ್ಷೆ ಸಿ.ವಿ ಪ್ರಮಿಳಾ ಅಧ್ಯಕ್ಷತೆ ವಹಿಸಿದ್ದರು. ನೀಲೇಶ್ವರ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ ಮೊದಲ ಮಾರಾಟವನ್ನು ನಿರ್ವಹಿಸಿದರು. ಗ್ರಾಪಂ ಉಪಾಧ್ಯಕ್ಚ ಪಿ.ವಿ ರಾಘವನ್, ಸ್ಥಾಯೀ ಸಮಿತಿ ಅಧ್ಯಕ್ಷ ಸಿ.ವಿ ಗಿರೀಶ್, ಕಾರ್ಯದರ್ಶಿ ಮನೋಜ್, ಗ್ರಾಪಂ ಸದಸ್ಯರಾದ ಸಜೀಂದ್ರನ್, ಕೆ.ಶ್ರೀಧರನ್, ಬಿಎಸ್‍ಎನ್‍ಇಎಸ್‍ಇಪಿ ಅಧ್ಯಕ್ಷೆ ಬಿ,ಎನ್ ಶ್ರೀಲತಾ ಉಪಸ್ಥಿತರಿದ್ದರು. ಆಗಸ್ಟ್ 20ರ ವರೆಗೆ ಓಣಂ ಮಾರಾಟಮೇಳ ಕಾರ್ಯಾಚರಿಸಲಿದೆ. ಕೋವಿಡ್ ಮಾನದಂಡದೊಂದಿಗೆ ಮೇಳ ಕಾರ್ಯಾಚರಿಸಲಿದೆ. ಮಾರಾಟ ಮೇಳಕ್ಕೆ ಆಗಮಿಸುವ ಕಲಾವಿದರಿಗೆ ಕಾರ್ಯಕ್ರಮದಲ್ಲಿ ಹಾಡು ಹೇಳಲೂ ಅವಕಾಶ ಕಲ್ಪಿಸಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries