HEALTH TIPS

ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸಬಾರದು ಏಕೆ? ಸೇವಿಸಿದರೆ ಏನಾಗುತ್ತದೆ?

                ನಮಗೆ ಹಾಲು ಮತ್ತು ಮೊಸರು ಎರಡೂ ಇಷ್ಟ, ಆದರೆ ಒಮ್ಮೆಲೆ ಎರಡನ್ನೂ ಸೇವಿಸುವುದಿಲ್ಲ, ಸೇವಿಸಲೂ ಬಾರದು. ಸಂದರ್ಭಕ್ಕೆ ತಕ್ಕಂತೆ ಹಾಲು ಮತ್ತು ಮೊಸರನ್ನು ಪ್ರತ್ಯೇಕವಾಗಿ ಸೇವಿಸುತ್ತೇವೆ. ಹಾಗಾದರೆ ಈ ಎರಡನ್ನೂ ಒಟ್ಟಿಗೆ ಸೇವಿಸಿದರೆ ಏನಾಗುತ್ತದೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡಬಹುದು ಅಲ್ಲವೇ? ಇಂದು ಈ ಲೇಖನದಲ್ಲಿ ಏಕೆ ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸಬಾರದು ಎಂದು ಹೇಳುತ್ತೇವೆ, ಕೊನೆಯವರೆಗೂ ಈ ಲೇಖನ ಓದಿ..

               ಹಾಲು ಮತ್ತು ಮೊಸರನ್ನು ಏಕೆ ಒಟ್ಟಿಗೆ ಸೇವಿಸಬಾರದು? ಸೇವಿಸಿದರೆ ಏನಾಗುತ್ತದೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:



                       ಉತ್ತಮ ಆರೋಗ್ಯಕ್ಕೆ ಆಹಾರದ ಸಂಯೋಜನೆ ಎಷ್ಟು ಮುಖ್ಯ?:

          ನಿಮ್ಮ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ, ಉತ್ತಮ ಜೀರ್ಣಕ್ರಿಯೆ ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸುವಲ್ಲಿ ಆಹಾರ ಸಂಯೋಜನೆಗಳು ಪ್ರಮುಖ ಪಾತ್ರವಹಿಸುತ್ತವೆ. ಅಡುಗೆಮನೆಯಲ್ಲಿ ಪ್ರಯೋಗ ಮಾಡುವುದು ಉತ್ತಮವಾಗಿದ್ದರೂ, ಕೆಲವು ಪದಾರ್ಥಗಳನ್ನು ಒಟ್ಟಿಗೆ ಬಳಸುವುದನ್ನು ತಪ್ಪಿಸುವುದು ಉತ್ತಮ ಏಕೆಂದರೆ ಅವುಗಳ ಸಂಯೋಜನೆಯು ನಿಮ್ಮ ಹೊಟ್ಟೆಗೆ ಹಾನಿ ಮಾಡುತ್ತದೆ. ಎರಡು ಹೊಂದಾಣಿಕೆಯಾಗದ ಆಹಾರಗಳನ್ನು ಸಂಯೋಜಿಸುವುದರಿಂದ ಕರುಳಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಅಂತಹ ಎರಡು ವಸ್ತುಗಳು ಎಂದರೆ ಹಾಲು ಮತ್ತು ಮೊಸರು.

                              ತಪ್ಪಾದ ಆಹಾರ ಸಂಯೋಜನೆಯಿಂದ ಏನಾಗುತ್ತದೆ?:

              ಆಯುರ್ವೇದದ ಪ್ರಕಾರ, ಕೆಲವು ಆಹಾರಗಳ ಸಂಯೋಜನೆಯು ಹೊಟ್ಟೆಯ ಸಾಮಾನ್ಯ ಕಾರ್ಯನಿರ್ವಹಣೆಯನ್ನು ತೊಂದರೆಗೊಳಿಸುತ್ತದೆ ಜೊತೆಗೆ ದೋಷಗಳ ಸಮತೋಲನವನ್ನು ಹಾಳು ಮಾಡುತ್ತದೆ. ಆಯುರ್ವೇದದಲ್ಲಿ ಮೂರು ಮೂಲಭೂತ ದೋಷಗಳಿವೆ: ವಾತ, ಪಿತ್ತ ಮತ್ತು ಕಫ,. ಉತ್ತಮ ಆರೋಗ್ಯವನ್ನು ಎಂದರೆ ಈ ಮೂರು ದೋಷಗಳ ಸಮತೋಲನ ಸ್ಥಿತಿಯಾಗಿದೆ. ಈ ಮೂರು ದೋಷಗಳ ಅಸಮತೋಲನದಿಂದ ಅನಾರೋಗ್ಯ ಹುಟ್ಟಿಕೊಳ್ಳುತ್ತದೆ. ತಪ್ಪಾದ ಆಹಾರ ಸಂಯೋಜನೆಯಿಂದ ಈ ದೋಷಗಳ ಅಸಮತೋಲನ ಉಂಟಾಗಿ ಅಜೀರ್ಣ , ವಾಯು ಮತ್ತು ಗ್ಯಾಸ್ ಹುಟ್ಟಿಕೊಳ್ಳಬಹುದು.

                           ಮೊಸರು ಮತ್ತು ಹಾಲನ್ನು ಒಟ್ಟಿಗೆ ಸೇವಿಸಬಾರದು ಏಕೆ?:

         ನೀವು ಹಾಲು ಮತ್ತು ಮೊಸರಿನ ಸಂಯೋಜನೆಯನ್ನು ದೂರವಿಡಲು ಹಲವು ಕಾರಣಗಳಿವೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಮೊಸರು ಒಂದು ಹುದುಗಿಸಿದ ಅಥವಾ ಸಂಗ್ರಹಿಸಿಟ್ಟ ಉತ್ಪನ್ನವಾಗಿದ್ದು, ಇದನ್ನು ಹಾಲಿನೊಂದಿಗೆ ಸೇವಿಸಬಾರದು, ಏಕೆಂದರೆ ಇದು ಸೋಂಕುಗಳು, ಹೊಟ್ಟೆಯ ಸಮಸ್ಯೆಗಳು ಮತ್ತು ಆರೋಗ್ಯ ಹಾಳಾಗಲು ಕಾರಣವಾಗಬಹುದು. ಮೊಸರನ್ನಷ್ಟೇ ಅಲ್ಲ, ಹುದುಗಿಸಿದ ಯಾವುದೇ ಆಹಾರವನ್ನು ಹಾಲಿನೊಂದಿಗೆ ಸೇವಿಸಬಾರದು, ಇವುಗಳ ಅನಾರೋಗ್ಯಕ್ಕೆ ಆಹ್ವಾನ ನೀಡುತ್ತವೆ.

              ಹುಳಿ ಮೊಸರು ದೇಹದ ಗ್ರಂಥಿಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಮೊಸರಿನ ಈ ಗುಣ ಹಾಲಿನ ವಿಶಿಷ್ಟ ಗುಣಲಕ್ಷಣಗಳಿಗೆ ತದ್ವಿರುದ್ಧವಾಗಿದೆ, ಅದಕ್ಕಾಗಿಯೇ ಆಯುರ್ವೇದದಲ್ಲಿ ಎರಡನ್ನೂ ಸಂಯೋಜಿಸಲು ಶಿಫಾರಸು ಮಾಡುವುದಿಲ್ಲ. ಆದ್ದರಿಂದ ಹೊಟ್ಟೆ ಸೆಳೆತ, ಉಬ್ಬರ ಅಥವಾ ಇತರ ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ಸಂದರ್ಭದಲ್ಲಿ ಈ ಎರಡು ಆಹಾರಗಳನ್ನು ಒಟ್ಟಿಗೆ ಸೇವಿಸುವುದನ್ನು ತಪ್ಪಿಸುವುದು ಉತ್ತಮ.

                ಹಾಗಾದರೆ, ಲಸ್ಸಿ ಮತ್ತು ಸ್ಮೂಥಿಗಳಂತಹ ಆಹಾರದಲ್ಲಿ ಎರಡನ್ನು ಸೇರಿಸುತ್ತಾರೆ ಎಂಬ ಪ್ರಶ್ನೆ ಬರಬಹುದು, ಆದರೆ ಅದನ್ನು ಕುಡಿದ ಮೇಲೆ ನಿಮಗೆ ಹೇಗನಿಸುತ್ತದೆ ಎಂಬುದನ್ನು ಒಮ್ಮೆ ಗಮನಿಸಿ. ಅದನ್ನು ಸೇವಿಸಿದ ಮೇಲೆ ಹೊಟ್ಟೆ ಕಿರಿಕಿರಿ ಉಂಟಾದರೆ, ಅವುಗಳನ್ನು ದೂರವಿಡುವುದು ಒಳಿತು.

                                        ಮೊಸರಿನೊಂದಿಗೆ ಈ ಆಹಾರಗಳನ್ನು ಸೇವಿಸಬೇಡಿ:

              ಹಾಲಿನ ರೀತಿ ಮೊಸರಿನ ಜೊತೆ ಸೇವಿಸಬಾರದು ಇನ್ನೂ ಹಲವಾರು ಪದಾರ್ಥಗಳಿವೆ. ಅವುಗಳೆಂದರೆ, ಹುಳಿ ಹಣ್ಣುಗಳು, ಕಲ್ಲಂಗಡಿ, ಮೀನು, ಮಾವು, ಬೆಣ್ಣೆ ಮತ್ತು ಬಾಳೆಹಣ್ಣು ಮುಖ್ಯವಾಗಿವೆ. ಇವುಗಳನ್ನು ಮೊಸರಿನ ಜೊತೆ ಸೇರಿಸಿ ತಿನ್ನಬೇಡಿ. ನಿಮ್ಮ ಆರೋಗ್ಯವನ್ನ ಎಲ್ಲಾ ರೀತಿಯಲ್ಲೂ ಹಾಳು ಮಾಡುತ್ತವೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries