HEALTH TIPS

ಉತ್ತರಾಖಂಡದಲ್ಲಿ ಅಪರೂಪದ ಆರ್ಕಿಡ್ ಪತ್ತೆ

              ಡೆಹ್ರಾಡೂನ್‌ಉತ್ತರಾಖಂಡ ರಾಜ್ಯದ ಚಮೊಲಿ ಜಿಲ್ಲೆಯ ಮಂಡಲ್ ಪ್ರದೇಶದ ಬೆಟ್ಟದಲ್ಲಿ ಅಪರೂಪದ ಆರ್ಕಿಡ್‌ ಪತ್ತೆಯಾಗಿದೆ.

           ಸೆಫ್ಲಾಂಥೆರಾ ಎರೆಕ್ಟಾ ವೆರೈಟಿಯ ಒಬ್ಲಾಂಸಿಒಲಟಾ ಹೆಸರಿನ ಈ ಆರ್ಕಿಡ್‌, 1870 ಮೀಟರ್‌ ಎತ್ತರದ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಸಂಶೋಧನೆ) ಸಂಚೀವ್ ಚತುರ್ವೇದಿ ತಿಳಿಸಿದ್ದಾರೆ. ಭಾರತದ ಸಸ್ಯ ವರ್ಗದಲ್ಲಿ ಇದೊಂದು ಹೊಸ ದಾಖಲೆ ಎಂದು ಅವರು ತಿಳಿಸಿದ್ದಾರೆ.

            ಈ ವರ್ಷದ ಮೇ ತಿಂಗಳಲ್ಲಿ ಹೊಸ ತಳಿಯ ಆರ್ಕಿಡ್ ಪತ್ತೆಯಾದರೂ, ಭಾರತೀಯ ಸಸ್ಯ ಶಾಸ್ತ್ರೀಯ ಸಮೀಕ್ಷಾ ವಿಭಾಗದವರು ಶನಿವಾರ ಈ ವಿಷಯವನ್ನು ಖಚಿತಪಡಿಸಿದ್ದಾರೆ' ಎಂದು ಅವರು ತಿಳಿಸಿದ್ದಾರೆ. ಉತ್ತರಾಖಂಡದಲ್ಲಿ ಪತ್ತೆಯಾಗಿರುವ ಈ ತಳಿಯ ಮಾದರಿಯನ್ನು ಇದೇ ಮೊದಲ ಬಾರಿಗೆ ದಾಖಲಿಸಲಾಗಿದೆ' ಎಂದು ತಿಳಿಸಿದ್ದಾರೆ.

            ಮಂಡಲ್‌ನಲ್ಲಿ ಹೂವು ಅರಳುವ ಸಮಯದಲ್ಲಿ ಹ್ಯೂಮಸ್‌ ಸಮೃದ್ಧವಾಗಿರುವ ಮಣ್ಣಿನಲ್ಲಿ ಈ ಆರ್ಕಿಡ್‌ಗಳು ಬೆಳೆಯುತ್ತಿರುವುದು ಕಂಡು ಬಂದಿದೆ ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries