ಮಂಜೇಶ್ವರ: ಜನಪರ ಯೋಜನೆಯ ಬೆಳ್ಳಿ ಹಬ್ಬದ ಅಂಗವಾಗಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಭಾಗವಾಗಿ ಮಂಜೇಶ್ವರ ಬ್ಲಾಕ್ ಪಂಚಾಯತಿ ಮಟ್ಟದಲ್ಲಿ ಮಂಗಳವಾರ ನಡೆದ ಸಮಾರಂಭವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿದರು. ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರಿ ಕಾರ್ಯದರ್ಶಿ ಜಗದಂಬ ವರದಿ ಮಂಡಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಮಾಜಿ ಅಧ್ಯಕ್ಷೆ ಆಯೇಷಾ ತಾಹಿರಾ, ಮುಮ್ತಾಜ್ ಸಮೀರಾ ಮತ್ತು ಅಬ್ದುಲ್ಲಾ ಕೆ ಅವರನ್ನು ಸನ್ಮಾನಿಸಲಾಯಿತು. ಟಿ.ಆರ್.ಕೆ. ಭಟ್ ಅವರ ನಿವಾಸಕ್ಕೆ ಬ್ಲಾಕ್ ಪಂಚಾಯತಿ ಪ್ರತಿನಿಧಿಗಳು ಭೇಟಿ ನೀಡಿ ಗೌರವಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜ.ಆರ್ ಬಲ್ಲಾಳ್ ಮತ್ತು ಶಮ್ಸೀನ. ಎ, ಬ್ಲಾಕ್ ಪಂಚಾಯತಿ ಸದಸ್ಯರಾದ ಶಫಾ ಫಾರೂಕ್, ಮೊಯ್ದೀನ್ ಕುಂಞÂ್ಞ, ಚಂದ್ರಾವತಿ ಟಿಎನ್, ಫಾತಿಮ ಸುಹರ, ಕೆ. ಅಶೋಕನ್, ಕೆ.ವಿ.ರಾಧಾಕೃಷ್ಣ, ಅಶ್ವಿನಿ ಎಂ.ಎಲ್ ಮತ್ತು ಬ್ಲಾಕ್ ಯೋಜನಾ ಸಮಿತಿ ಉಪಾಧ್ಯಕ್ಷ ಅಲಿ ಮಾಸ್ತರ್ ಮಾತನಾಡಿದರು.

