ಮುಳ್ಳೇರಿಯ: ಕೇರಳ ಜನಪರ ಯೋಜನೆಯ ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾದ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಕಾರಡ್ಕ ಬ್ಲಾಕ್ ಪಂಚಾಯತಿ ಸಭಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಬ್ಲಾಕ್ ಪಂಚಾಯತಿ ಅಧ್ಯಕ್ಷ ಸಿ.ಜಿ.ಮ್ಯಾಥ್ಯೂ ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಬ್ಲಾಕ್ ಪಂಚಾಯತಿ ಕಾರ್ಯದರ್ಶಿ ಎಂ.ಕೆ.ದಿಲೀಪ್ ವರದಿ ಮಂಡಿಸಿದರು. ಬಡತನ ನಿರ್ಮೂಲನೆ ವಿಭಾಗ ಜಿಲ್ಲಾ ಯೋಜನಾ ನಿರ್ದೇಶಕ ಕೆ. ಪ್ರದೀಪ್ ಮುಖ್ಯ ಅತಿಥಿಯಾಗಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ.ನಾರಾಯಣನ್ ಮತ್ತು ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಸ್. ಸವಿತಾ, ಕಲ್ಯಾಣ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಸ್ಮಿತಾ ಪ್ರಿಯರಂಜನ್, ಬ್ಲಾಕ್ ಪಂಚಾಯತಿ ಸದಸ್ಯರಾದ ಎಂ. ಕುಂಞÂಂಬು ನಂಬಿಯಾರ್, ಎನ್. ರವಿ ಪ್ರಸಾದ್, ಸಾವಿತ್ರಿ ಬಾಲನ್, ವಸಂತಿ ವೇಣುಗೋಪಾಲ್, ಚನಿಯ ನಾಯಕ್, ಬಿ. ಕೃಷ್ಣನ್, ಎನ್. ಯಶೋದಾ, ಕೆ. ನಳಿನಿ ಮಾತನಾಡಿದರು.
ಕಾರಡ್ಕ ಬ್ಲಾಕ್ ಪಂಚಾಯತಿಯ ಮಾಜಿ ಅಧ್ಯಕ್ಷ ಬಿ.ಎಂ.ಪ್ರದೀಪ್ ಮತ್ತು ಓಮನಾ ರಾಮಚಂದ್ರನ್ ಮತ್ತು ಉಪಾಧ್ಯಕ್ಷರಾದ ಎಂ. ಮಿನಿ, ಸಿಕೆ ಕುಮಾರನ್ ಮತ್ತು ಮಾಜಿ ಕಾರ್ಯದರ್ಶಿಗಳಾದ ಬಿ.ಎಸ್. ಬಾಲಕೃಷ್ಣ, ಇ. ವಿಶ್ವನಾಥನ್, ಕಿಲಾ ಫ್ಯಾಕಲ್ಟಿ ಮಾಜಿ ಕಾರ್ಯದರ್ಶಿ ಇ. ಗಂಗಾಧರನ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಬ್ಲಾಕ್ ಪಂಚಾಯತಿ ಉಪಾಧ್ಯಕ್ಷೆ ಕೆ. ರಮಣಿ ಸ್ವಾಗತಿಸಿ, ಬ್ಲಾಕ್ ಪಂಚಾಯತಿ ಜನರಲ್ ವಿಸ್ತರಣಾ ಅಧಿಕಾರಿ ಎನ್ ಎ ಮಜೀದ್ ವಂದಿಸಿದರು.

