ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸವಾಕ್ ವತಿಯಿಂದ ಕಲಾವಿದರ ಗೃಹ ಸಂದರ್ಶನ ಏರ್ಪಡಿಸಲಾಗಿತ್ತು. ಉದುಮದಲ್ಲಿರುವ ಹಿರಿಯ ಕಲಾವಿದ ಮಾಧವ ಕಾಸರಗೋಡು ಅವರ ಮನೆಯಲ್ಲಿ ಮೊದಲ ಕಾರ್ಯಕ್ರಮ ನಡೆಯಿತು. ಮಾಧವ ಕಾಸರಗೋಡು ದೀಪ ಬೆಳಗಿಸಿ ಉದ್ಘಾಟಿಸಿದರು. ತಾರಾನಾಥ ಮಧೂರು, ಉದಯ ಕಾಸರಗೋಡು, ಉದಯ ಕಲ್ಲೂರಾಯ ಕಾವುಗೋಳಿ, ಉಮೇಶ್ ಮಾಸ್ಟರ್ ಫ್ಯೂಶನ್ ಅವರ ಮನೆಗಳ ಸಂದರ್ಶನ ನಡೆಯಿತು.
ಸಂಜೆ ಪಿಲಿಕುಂಜೆ ಬಹುಮಾನ್ ಮನೆತನದ ಹೇಮಾಂಬಿಕ ದೇವರಮನೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಉದಯ ಕಲ್ಲೂರಾಯ ಉದ್ಘಾಟಿಸಿದರು. ಸವಾಕ್ ಜಿಲ್ಲಾಧ್ಯಕ್ಷ ಎಂ.ಉಮೇಶ್ ಸಾಲ್ಯಾನ್ ಕಾಸರಗೋಡು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ 75ನೇ ವರ್ಷಾಚರಣೆಯ ಸಂಭ್ರಮದಲ್ಲಿ ಕಲಾವಿದರ ಒಕ್ಕೂಟವಾದ ಸವಾಕ್ ಹಮ್ಮಿಕೊಂಡಿರುವ ಮನೆಮನೆ ಸಂದರ್ಶನ ಅನುಕರಣೀಯ ಕಾರ್ಯಕ್ರಮವಾಗಿದೆ. ಕೋವಿಡ್ ಮಹಾಮಾರಿಯ ಸಂಕಷ್ಟದಲ್ಲಿ ಸಿಲುಕಿರುವ ಕಲಾವಿದರು ಸoಕಷ್ಟದಿಂದ ಕಾಲಕಳೆಯುವಂತಾಗಿದ್ದು, ಪರಸ್ಪರ ಸಂಪರ್ಕಿಸಲೂ ತೊಡಕಾಗಿರುವ ಇಂದಿನ ಸಂಕೀರ್ಣ ಸ್ಥಿತಿಯಲ್ಲಿ ಪರಸ್ಪರ ಸಂವೇದನಾಶೀಲರಾಗಲು ಇಂತಹ ಕಾರ್ಯಕ್ರಮ ಫಲಪ್ರವಾಗಿ ಯಶಸ್ವಿಯಾಗಿದೆ ಎಂದು ತಿಳಿಸಿದರು.
ಬ್ಲಾಕ್ ಅಧ್ಯಕ್ಷ ದಯಾ ಪಿಲಿಕುಂಜೆ, ಕಾರ್ಯದರ್ಶಿ ಸುಶ್ಮಿತ ಕುಂಬಳೆ, ನರೇಂದ್ರ, ಭಾರತಿ ಬಾಬು, ದಿವಾಕರ, ಮುಕುಂದ ರಾಜ್, ವಾಸು ಬಾಯಾರ್, ಹರಿಕಾಂತ್, ಉಮೇಶ್ ಮಾಸ್ಟರ್ ಫ್ಯೂಶನ್, ವಿನೋದ್ ಕುಮಾರ್, ನಗರಸಭೆ ಸದಸ್ಯೆ ವಿಮಲಾ ಶ್ರೀಧರ್ ಉಪಸ್ಥಿತರಿದ್ದರು. ಸುಶ್ಮಿತ ಸ್ವಾಗತಿಸಿ, ಹರಿಕಾಂತ್ ವಂದಿಸಿದರು. ಬಳಿಕ ತಾಳಮದ್ದಳೆ ಕೂಟ ಜರಗಿತು.

