ಉಪ್ಪಳ: ಕೇರಳ ಆರ್ಟಿಸ್ಟ್ ಫೆಡರೇಶನ್(ಕಾಫ್) ನೇತೃತ್ವದಲ್ಲಿ ಮಂಗಳವಾರ ರಾಜ್ಯಾದ್ಯಂತ ಹಮ್ಮಿಕೊಳ್ಳಲಾದ ಓಣಂ ಕಿಟ್ ವಿತರಣೆಯ ಅಂಗವಾಗಿ ಮಂಗಲ್ಪಾಡಿ ಪಂಚಾಯತಿ ಸಭಾಂಗಣದಲ್ಲಿ ನಡೆದ ಮಂಜೇಶ್ವರ ಬ್ಲಾಕ್ ಮಟ್ಟದ ಕಾರ್ಯಕ್ರಮವನ್ನು ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸಿ ಚಾಲನೆ ನೀಡಿದರು. ಸಮಾರಂಭದಲ್ಲಿ ಹಿರಿಯ ವಾದ್ಯ ಕಲಾವಿದರಾದ ಶ್ರೀ ಪಾಡಂಗರೆ ಭಗವತಿ ಕ್ಷೇತ್ರ ದ ಬೆಳ್ಚಪ್ಪಾಡ ಸುಂದರ ಬೆಳ್ಚಪ್ಪಾಡ ಅವರು ದೀಪ ಬೆಳಗಿಸಿದರು.
ಉದ್ಘಾಟಿಸಿ ಮಾತನಾಡಿದ ಶಾಸಕ ಎಕೆಎಂ ಅಶ್ರಫ್ ಮಾತನಾಡಿ ಕಲಾವಿದರಿಗೆ ಸರ್ಕಾರದ ನೆರವಿನ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನೂ ಮಾಡಲಾಗುವುದು. ಪ್ರಸ್ತುತ ಕಲಾವಿದರು ಸಂಕಷ್ಟದಲ್ಲಿ ಜೀವಿಸುತ್ತಿದ್ದು ಕಾಫ್ ನ ಎಲ್ಲಾ ಸದಸ್ಯರ ಬೇಡಿಕೆಗಳಿಗೆ ಧ್ವನಿಯಾಗಿ ಜೊತೆಯಲ್ಲಿರುವೆ ಎಂದು ಭರವಸೆ ನೀಡಿದರು.
ಮಂಗಲ್ಪಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ರಿಶಾನ ಶೆಬೀರ್,ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸೆಮೀರಾ ಟೀಚರ್, ಚಲನಚಿತ್ರ ನಟ,ನಾಟಕ ಕಲಾವಿದ ರಾಧಾಕೃಷ್ಣ ಕುಂಬಳೆ, ಚಲನಚಿತ್ರ ಸಾಹಿತ್ಯ ರಚನೆಗಾರ ಹರೀಶ್ ಕುಂಬಳೆ, ಇಂಚರಾ ಕ್ರೀಯೇಷನ್ ಮತ್ತು ಮೆಲೋಡಿಸ್ ಸ್ಥಾಪಕ ಕೇಶವ ಕನಿಲ, ವಿಜಯ ಮಾಸ್ತರ್, ಕಾಫ್ ಕಾಸರಗೋಡು ಜಿಲ್ಲಾಧ್ಯಕ್ಷ ಡಾ.ಶಿವ.ಕಾಸರಗೋಡು, ಕಾಫ್ ಮಂಜೇಶ್ವರ ವಲಯದ ಅಧ್ಯಕ್ಷ ನಿರಂಜನ್, ಕಾರ್ಯದರ್ಶಿ ಚಂದ್ರಹಾಸ್ ಲೀಲಾಸ್ ಟ್ರಶರರ್ ಮನುರಾಜ್, ಪಿ ಆರ್ ಒ ಉಮ್ಮರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಹಿರಿಯ ಕಲಾವಿದರಾದ ರಾಧಾಕೃಷ್ಣ ಕುಂಬಳೆ, ಚಲನಚಿತ್ರ ಸಾಹಿತ್ಯ ರಚನೆಗಾರ ಹರೀಶ್ ಕುಂಬಳೆ. ಮತ್ತು ಸುಂದರ ಬೆಳ್ಚಪ್ಪಾಡರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾಫ್ ಕಾರ್ಯದರ್ಶಿ ಚಂದ್ರಹಾಸ್ ಲೀಲಾಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಫ್ ಸದಸ್ಯ ಎನ್.ಕೆ ಕುಲಾಲ್ ಬೇಕೂರು ನಿರೂಪಿಸಿ, ವಂದಿಸಿದರು.

