ಕಾಸರಗೋಡು: ವರದಕ್ಷಿಣೆ ವಿರುದ್ಧ ನಿಷೇಧವನ್ನು ಜಾರಿಯಲ್ಲಿದ್ದರೂ, ಇಂದಿಗೂ ಇಂತಹ ಅಕ್ರಮ ಪಿಡುಗು ಪುನರಾವರ್ತನೆಗೊಳ್ಳುತ್ತಿರುವುದು ವಿಷಾದನೀಯ. ಇದರ ವಿರುದ್ಧ ಜಾಗೃತಿ ಮನೆಗಳಿಂದಲೇ ಆರಂಭವಾಗಬೇಕು ಎಂದು ರಾಜ್ಯ ಮಹಿಳಾ ಆಯೋಗ ಸದಸ್ಯೆ ಡಾ.ಷಾಹಿದಾ ಕಮಾಲ್ ಅವರು ತಿಳಿಸಿದ್ದಾರೆ.
ಆಯೋಗ ಮತ್ತು ಕುಟುಂಬಶ್ರೀ ಜಿಲ್ಲಾ ಮಿಷನ್ ವತಿಯಿಂದ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ವರದಕ್ಷಿಣೆ ವಿರುದ್ಧ 'ಜಾಗೃತಿ ಹೊಂದಿರುವ ಸಮಾಜ' ಎಂಬ ವಿಷಯದ ಏಕದಿನ ವಿಚಾರಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರದಕ್ಷಿಣೆ ಸಂಬಂಧ ಸಾರ್ವತ್ರಿಕ ವಿರೋಧ ವ್ಯಕ್ತವಾಗುತ್ತಿರುವ ನಡುವೆ, ಕಾನೂನು ಬಾಹಿರ ಕೃತ್ಯಗಳು ಮರುಕಳಿಸುತ್ತಿದೆ. ಕುಟುಂಬ ಮಟ್ಟದಿಂದಲೇ ವರದಕ್ಷಿಣೆ ವಿರುದ್ಧ ಜಾಗರೂಕತೆ ಮೂಡಿಬರಬೇಕು ಎಂದು ತಿಳಿಸಿದರು.
ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಚಾಲಕ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಸಿ.ಪಿ.ಶುಭಾ ಉಪನ್ಯಾಸ ನಡೆಸಿದರು. ಕುಟುಂಬಶ್ರೀ ಎ.ಡಿ.ಎಂ.ಸಿ. ಪ್ರಕಾಶನ್ ಪಾಲಾಯಿ ಸ್ವಾಗತಿಸಿದರು. ಕುಟುಂಬಶ್ರೀ ಜೆಂಡರ್ ಜಿಲ್ಲಾ ಕಾರ್ಯಕ್ರಮ ಪ್ರಬಂಧಕಿ ಆರತಿ ವಂದಿಸಿದರು.




