ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀಕಂಠಪಾಡಿ ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ನಿನ್ನೆ ಸಾಂಪ್ರದಾಯಿಕ ನಾಗಾರಾಧನೆ ನೆರವೇರಿತು.
ಶ್ರೀಕ್ಷೇತ್ರದ ಗರ್ಭಗುಡಿಯ ಸನಿಹದಲ್ಲಿ ವಿಶೇಷ ನಾಗನ ಗುಹಾ ಸಾನ್ನಿಧ್ಯವಿದ್ದು, ನಾಗರ ಪಂಚಮಿಯ ಅಂಗವಾಗಿ ಸೀಯಾಳ ಅಭಿಷೇಕ, ಕ್ಷೀರಾಭಿಷೇಕ, ಹಾಲು ಪಾಯಸ ಸಮರ್ಪಣೆ, ತಂಬಿಲ ಪೂಜೆಯೊಂದಿಗೆ ಸಂಪನ್ನಗೊಂಡಿತು.






