ಕಾಸರಗೋಡು: ಮೀನುಗಾರರ ಮಕ್ಕಳಿಗೆ ಮೆಡಿಕಲ್ ಎಂಟ್ರೆನ್ಸ್, ಬಾಂಕ್ , ಪಿ.ಎಸ್.ಸಿ. ಸಹಿತ ಸ್ಪರ್ಧಾ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು. ಮೆಡಿಕಲ್ ಎಂಟ್ರೆನ್ಸ್ ತರಬೇತಿಗೆ ಹೈಯರ್ ಸೆಕೆಂಡರಿ ಮಟ್ಟದಲ್ಲಿ ಫಿಸಿಕ್ಸ್, ಕೆಮೆಸ್ಟ್ರಿ, ಬಯಾಲಜಹಿ ವಿಷಯಗಳಲ್ಲಿ ಶೇ 85 ಅಂಕ ಪಡೆದವರು ಯಾ ನೀಟ್ ಪರೀಕ್ಷೆಯಲ್ಲಿ ಸೇ 40 ಅಂಕ ಗಳಿಸಿದವರು ಅರ್ಜಿ ಸಲ್ಲಿಸಬಹುದು. ಬಾಂಕ್ ಟೆಸ್ಟ್ ತರಬೇತಿಗೆ ಪದವಿ ಮಟ್ಟದಲ್ಲಿ ಸೇ 60 ಅಂಕ, ಪಿ.ಎಸ್.ಸಿ. ತರಬೇತಿಗೆ ಪದವಿ ಮಟ್ಟದಲ್ಲಿ ಸೇ 50 ಅಂಕ, ಸಿವಿಲ್ ಸರ್ವೀಸ್ ತರಬೇತಿಗೆ ಪದವಿ ಮಟ್ಟದಲ್ಲಿ ಶೇ 60 ಅಂಕ ಪಡೆದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆ.26ರ ಮುಂಚಿತವಾಗಿ ಮತ್ಸ್ಯ ಭವನಗಳ ಮೂಲಕ ಯಾ ಫಿಷರೀಸ್ ಡೆಪ್ಯೂಟಿ ಡೈರೆಕ್ಟರ್ ಅವರ ಕಾರ್ಯಾಲಯ ಮೂಲಕ ಅರ್ಜಿ ಸಲ್ಲಿಸಬಹುದು.

