ಮಂಜೇಶ್ವರ: ಇತ್ತೀಚೆಗೆ ಅಗಲಿದ ತೆಂಕುತಿಟ್ಟು ಯಕ್ಷಗಾನದ ನಿಜಾರ್ಥದ ಸವ್ಯಸಾಚಿ ಕಲಾವಿದ, ಅಭಿನವ ವಾಲ್ಮೀಕಿ ಖ್ಯಾತಿಯ ಭಾಗವತ, ಪ್ರಸಂಗಕರ್ತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಮತ್ತು ಅಧ್ಯಯನ ಕೇಂದ್ರದಲ್ಲಿ ತಾಳಮದ್ದಳೆಯೊಂದಿಗೆ ಶ್ರದ್ದಾಂಜಲಿ ನುಡಿನಮನ ನಡೆಯಿತು.
ವರ್ಷದ ಹಿಂದೆ ಕುಂಜತ್ತೂರು ಮಹಾಲಿಂಗೇಶ್ವರ ದೇಗುಲದಲ್ಲಿ ಯಕ್ಷಗಾನ ಶಿಕ್ಷಣದ ಅಧ್ಯಯನ ಕೇಂದ್ರವನ್ನು ಭಾಗವತ ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ಉದ್ಘಾಟಿಸಿದ್ದರು. ಇದೀಗ ಅನಾರೋಗ್ಯದಿಂದ ಅಕಾಲಿಕ ಅಗಲಿದ ಅವರಿಗೆ ಅದೇ ಕೇಂದ್ರದಲ್ಲಿ ಭಾನುವಾರ ನಡೆದ ಶ್ರದ್ದಾಂಜಲಿ ಸಭೆಯಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶರಾವ್ ಚಿಗುರುಪಾದೆ, ಕಣಿಪುರ ಯಕ್ಷಗಾನ ಮಾಸಪತ್ರಿಕೆ ಸಂಪಾದಕ ಎಂ. ನಾ. ಚಂಬಲ್ತಿಮಾರ್, ದಾಮೋದರ ಶೆಟ್ಟಿ ಮಜಿಬೈಲು, ಸದಾಶಿವ ಆಳ್ವ ತಲಪಾಡಿ, ವಿದ್ಯಾಧರ ಶೆಟ್ಟಿ ಪೆÇಸಕುರಲ್ ನುಡಿನಮನ ಸಲ್ಲಿಸಿದರು. ಭಾಗವತ ರಾಜಾರಾಂ ಹೊಳ್ಳ, ಕ್ಷೇತ್ರದ ಅರ್ಚಕ ಮಂಜುನಾಥ ಭಟ್ಟ ಉಪಸ್ಥಿತರಿದ್ದರು. ಗಣೇಶ ಶೆಟ್ಟಿ ಕುಂಜತ್ತೂರು ಸ್ವಾಗತಿಸಿ, ನಿರೂಪಿಸಿದರು. ಕುಂಜತ್ತೂರು ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ವಂದಿಸಿದರು.
ಬಳಿಕ "ಸೀತಾಪರಿತ್ಯಾಗ" ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಜಾರಾಂ ಹೊಳ್ಳ, ಚೆಂಡೆ, ಮದ್ದಳೆಯಲ್ಲಿ ಪೆರ್ಲ ಗಣಪತಿ ಭಟ್, ಕೀರ್ತನ್ ನಾಯ್ಗ ಮಾಡೂರು, ರಮೇಶ ಶೆಟ್ಟಿ ಕುಂಜತ್ತೂರು ಭಾಗವಹಿಸಿದರೆ ಮುಮ್ಮೇಳದ ಅರ್ಥಗಾರಿಕೆಯಲ್ಲಿ ಸದಾಶಿವ ಆಳ್ವ ತಲಪಾಡಿ, ನಾಗರಾಜ ಭಟ್ ಕುಂಕಿಪಾಲ, ಗಣೇಶ ಶೆಟ್ಟಿ ಕುಂಜತ್ತೂರು, ವಿದ್ಯಾಧರ ಪೆÇಸಕುರಲ್, ಹರಿಶ್ಚಂದ್ರ ನಾಯ್ಗ ಮಾಡೂರು, ಸುಧಾಕರ ಶೆಟ್ಟಿ, ಮಂಜುನಾಥ ಭಟ್, ವಿಶ್ಶನಾಥ ಶೆಟ್ಟಿ ಚಕ್ರತೀರ್ಥ ಭಾಗವಹಿಸಿದರು.




