ಕುಂಬಳೆ: ವರ್ತಮಾನದ ಸಮಾಜದಲ್ಲಿ, ವಿಶೇಷವಾಗಿ ಕೋವಿಡ್ ಅವಧಿಯಲ್ಲಿ ಸಾಮಾಜಿಕ ಮಾಧ್ಯಮದ ಚಟುವಟಿಕೆಗಳು ಮತ್ತು ಅದರ ಸಾಮಾಜಿಕ ಸಕ್ರಿಯಾತ್ಮಕ ವಾರ್ತಾ ವಿಶ್ಲೇಷಣೆಗಳು ಸಕಾರಾತ್ಮಕವಾಗಿ ಶ್ಲಾಘನೀಯವಾದುದು ಎಂದು ಜಿಲ್ಲಾ ಒಲಿಂಪಿಕ್ ಸಂಘದ ಅಧ್ಯಕ್ಷೆ ಶೋಭಾ ಬಾಲನ್ ಅಭಿಪ್ರಾಯಪಟ್ಟಿದ್ದಾರೆ.
ದುಬೈ ಮಲಬಾರ್ ಸಾಂಸ್ಕøತಿಕ ವೇದಿಕೆ ಭಾನುವಾರ ಕುಂಬಳೆ ಆರಿಕ್ಕಾಡಿಯಲ್ಲಿ ಆಯೋಜಿಸಿದ್ದ 'ಆನ್‍ಲೈನ್ ಮಾಧ್ಯಮದೊಂದಿಗೆ ಓಣಂ ಆಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿ.ಪಿ.ಅಬ್ದುಲ್ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಮುಖ್ಯ ಅತಿಥಿಯಾಗಿದ್ದರು.
ಜಿಲ್ಲೆಯ ವಿಭಿನ್ನ ಸಾಮಥ್ರ್ಯದ ಕ್ರಿಕೆಟ್ ತಾರೆ ಅಲಿ ಪಡಾರ್, ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಸಿ.ಎ ಸೈಮಾ ಮತ್ತು ಜಿಲ್ಲಾ ಪಂಚಾಯತಿ ಸದಸ್ಯೆ ಜಾಸ್ಮಿನ್ ಕಬೀರ್, ಮುಖ್ಯಮಂತ್ರಿಗಳ ಪೋಲೀಸ್ ಪದಕ ಪುರಸ್ಕೃತ, ಕುಂಬಳೆ ಠಾಣಾ ಸಬ್ ಇನ್ಸ್‍ಪೆಕ್ಟರ್ ಕೆ.ವಿ.ಪಿ. ರಾಜೀವನ್, ಕಾಸರಗೋಡು ಮಹಿಳಾ ಸಬ್ ಇನ್ಸ್‍ಪೆಕ್ಟರ್ ಅಜಿತ ಮಂಜುನಾಥ ಆಳ್ವ, ಕಯ್ಯೂಮ್ ಮಾನ್ಯ, ಹನೀಫ್ ಗೋಲ್ಡ್ ಕಿಂಗ್, ಬಶೀರ್ ಪಳ್ಳಿಕ್ಕೆರೆ, ಕಬೀರ್ ಚೆರ್ಕಳ, ರಮ್ಶಾದ್. ನಾಸರ್ ಮೊಗ್ರಾಲ್, ಯೂಸುಫ್ ಉಳುವಾರ್, ಅನ್ವರ್ ಹುಸೇನ್, ಕೆವಿ ಯೂಸುಫ್ ಮತ್ತು ವಿನಯ ಆರಿಕ್ಕಾಡಿ ಈ ಸಂದರ್ಭದಲ್ಲಿ ಮಾತನಾಡಿದರು.
2019 ರ ರಾಜ್ಯ ಕಲೋತ್ಸವದಲ್ಲಿ ಆಂಗ್ಲ ಕಾವ್ಯದಲ್ಲಿ ಪ್ರಥಮ ಬಹುಮಾನ ಪಡೆದ ಫಾತಿಮತ್ ಶೈಮ ತಳಂಗರೆ, ಕೋವಿಡ್ ಅವಧಿಯಲ್ಲಿ ಸಲ್ಲಿಸಿದ ಸೇವಾ ತತ್ಪರತೆಗಾಗಿ ಶುಹೈಲ್ ಕೋಪೆ, ಬಶೀರ್ ಚೇರಂಗೈ, ತೆಲಹತ್ ತಳಂಗರೆ, ಮತ್ತು ಆರಿಕ್ಕಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರಂತರ ಸೇವಾ ತತ್ಪರರಾಗಿ ವೈಟ್ ಗಾರ್ಡ್ ಸದಸ್ಯರಾದ ಆಸೀಫ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ದುಬೈ ಮಲಬಾರ್ ಕಲೆ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಅಶ್ರಫ್ ಕಾರ್ಲೆ ಸ್ವಾಗತಿಸಿ, ಬಿ.ಎ.ರಹಿಮಾನ್ ವಂದಿಸಿದರು. ಬಳಿಕ ಓಣಂ ಔತಣ ಕೂಟ ನಡೆಯಿತು.





