ಬದಿಯಡ್ಕ: ಪದ್ಮಪ್ರಿಯ ಭಜನಾ ಮಂಡಳಿಯ ದಶಮಾನೋತ್ಸವ ಮತ್ತು ಶಿವಳ್ಳಿ ಬ್ರಾಹ್ಮಣ ಸಭಾ ಮಹಿಳಾ ಘಟಕದ ವತಿಯಿಂದ ಮಂಗಳ ಗೌರಿ ವ್ರತವು ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರ ದಿವ್ಯ ಉಪಸ್ಥಿತಿ ಹಾಗು ಅನುಗ್ರಹದೊಂದಿಗೆ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಚಕ್ರಪಾಣಿ ದೇವಪೂಜಿತ್ತಾಯರ ನೇತೃತ್ವದಲ್ಲಿ ಚಂಡಿಕಾ ಯಾಗ ಮತ್ತು ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರಗಿತು.
ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟಿಸಿದರು. ಚಕ್ರಪಾಣಿ ದೇವಪೂಜಿತ್ತಾಯ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಶ್ರೀ ವಿಷ್ಣು ಆಸ್ರ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ರಾಜೇಂದ್ರ ಕಲ್ಲೂರಾಯ, ಪ್ರೇಮ ಬಾರಿತ್ತಾಯ ಉಪಸ್ಥಿತರಿದ್ದರು.
ಸಂಘದ ಹಿರಿಯ ಸದಸ್ಯೆ ವಸಂತಿ ದೇವಪೂಜಿತ್ತಾಯ ಶುಭಹಾರೈಸಿದರು. ಬ್ರಹ್ಮಶ್ರೀ ವಿಷ್ಣು ಪ್ರಕಾಶ ಕಾವು ಪಟ್ಟೇರಿ ಅವರನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು. ಮಂಡಳಿಯ ಭಜನಾ ಗುರುಗಳಾದ ರಾಮಕೃಷ್ಣ ಕಾಟುಕುಕ್ಕೆ ಅವರು ಭಜನೆಯ ಮಹತ್ವದ ಕುರಿತು ಸಭೆÉಯಲ್ಲಿ ವಿವರಿಸಿದರು. ಮಧುರಾ ಅಗ್ಗಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸರಸ್ವತಿ ಅಡಿಗ ಸ್ವಾಗತಿಸಿದರು. ಮಮತಾ ಚಕ್ರಪಾಣಿ ವರದಿ ವಾಚಿಸಿದರು. ಜಯ ಭಾರತಿ ಪಟ್ಟೇರಿ ಮತ್ತು ರಶ್ಮಿ ತಂತ್ರಿ ಅವರು ಪ್ರಾರ್ಥನೆ ಹಾಡಿದರು. ನಮಿತಾ ವಸಂತ್ ವಂದಿಸಿದರು. ಸುಮಂಗಲಾ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.




