ಮಂಜೇಶ್ವರ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮೀಂಜ ಖಂಡ ಸಮಿತಿ ಒಡಿಯೂರು ಶ್ರೀಗಳವರ ಷಷ್ಟ್ಯಬ್ಧ ಸಂಭ್ರಮ ಸಮಿತಿ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತ ವೃಂದದ ವತಿಯಿಂದ ಕಳೆದ ಏಳು ದಿನಗಳಿಂದ ನಡೆಯುತ್ತಿದ್ದ ರಾಮಾಯಣ ಮಾಸಾಚರಣೆ ಭಜನಾ ಸತ್ಸಂಗ ಶ್ರೀರಾಮ ತಾರಕ ಮಂತ್ರ ಮತ್ತು ಹನುಮಾನ್ ಚಾಲೀಸ ಪಠಣದ ಸಮಾರೋಪ ಮತ್ತು ಅಖಂಡ ಭಾರತ್ ಸಂಕಲ್ಪ ದಿನಾಚರಣೆ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ಕ್ಷೇತ್ರದ ನಟರಾಜ ವೇದಿಕೆಯಲ್ಲಿ ನಡೆಯಿತು.
ಮೀಂಜ ವಿ.ಎಚ್.ಪಿ. ಖಂಡ ಸಮಿತಿ ಅಧ್ಯಕ್ಷ ದಿನೇಶ ಅಮ್ಮೆನಡ್ಕ ಅಧ್ಯಕ್ಷತೆ ವಹಿಸಿದ್ದರು. ವಿಹಿಂಪ ಮಂಗಳೂರು ಗ್ರಾಮಾಂತರ ಜಿಲ್ಲೆ ಉಪಾಧ್ಯಕ್ಷೆ ಮೀರಾ ಆಳ್ವ ಬೌದ್ದಿಕ್ ನೀಡಿದರು. ರಮೇಶ್ ಸಂತಡ್ಕ ಹಾಗೂ ಪ್ರಶಾಂತ್ ಪಜಿಂಗಾರ್ ಹನುಮಾನ್ ಚಾಲೀಸ ಪಠಣೆಗೈದರು. ಬಜರಂಗದಳಾ ಜಿಲ್ಲಾ ಸಂಯೋಜಕ ಶೈಲೇಶ್ ಅಂಜರೆ ಮೀಂಜ ಖಂಡ ಸಮಿತಿ ಸತ್ಸಂಗ ಪ್ರಮುಖ್ ವಸಂತ ಭಟ್ ತೊಟ್ಟ್ಟೆತ್ತೋಡಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ವಿ.ಎಚ್.ಪಿ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಸ್ವಾಗತಿಸಿದರು. ರಾಜೇಶ್ವರಿ ಟೀಚರ್ ವಂದೇಮಾತರಂ ಗೀತೆಯನ್ನು ಹಾಡಿದರು. ಸುರೇಶ್ ಶೆಟ್ಟಿ ಪರಂಕಿಲ, ಜಿಲ್ಲಾ ಕಾರ್ಯಾಧ್ಯಕ್ಷ ಅರಿಬೈಲ್ ಗೋಪಾಲ್ ಶೆಟ್ಟಿ, ಸುಧೀನ್ ಕರ್ಕೇರ, ಜನಾರ್ಧನ ಆಚಾರ್ಯ ಹೊಸಂಗಡಿ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕಿ ಸೌಮ್ಯಾ ಪ್ರಕಾಶ್ ಮುಂತಾದವರು ಭಾಗವಹಿಸಿದ್ದರು. ಮೀಂಜ ಖಂಡ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಶ ವಂದಿಸಿದರು.






