HEALTH TIPS

ಸಮರಸ ಈ ಹೊತ್ತಿಗೆ ಈ ಹೊತ್ತಗೆ: ಪುಸ್ತಕ:ಡಾ ಕೆ ಶಿವರಾಮ ಕಾರಂತರ ಪಾತಾಳಕ್ಕೆ ಪಯಣ ಪ್ರವಾಸ ಕಥನ ಪುಸ್ತಕದ ಪರಿಚಯ : ಬರಹ: ಕಾರ್ತಿಕ್ ಕುಮಾರ್ ಕೆ

                                 

               ಡಾ. ಕೆ. ಶಿವರಾಮ ಕಾರಂತರು ಹಲವಾರು ದೇಶಗಳನ್ನು ತಿರುಗಿದರೂ ಎಲ್ಲಾ ದೇಶಕ್ಕೆ ತಿರುಗಿದ ಪ್ರವಾಸ ಕಥನವನ್ನು ಅವರು ಬರೆಯಲಿಲ್ಲ. ಬಹಳ ಹಿಂದೆ ಅವರು ಅಬುದಾಬಿ ಹಾಗೂ ಬರ್ಮಾಕ್ಕೆ ಪ್ರಯಾಣಿಸಿದ್ದರು. ಅದರ ಕುರಿತು "ಅಬುವಿಂದ ಬರ್ಮಾಕ್ಕೆ", ಎಂಬ ಪ್ರವಾಸ ಕಥನವನ್ನು ಬರೆದಿದ್ದರು. ಇದು ಅವರ ಮೊದಲ ಪ್ರವಾಸ ಕಥನ. ಅನಂತರ ಅವರು ಮತ್ತೆ ಹಲವು ದೇಶಗಳನ್ನು ತಿರುಗಿ "ಅಪೂರ್ವ ಪಶ್ಚಿಮ"  ಎಂಬ ಇನ್ನೊಂದು ಪ್ರವಾಸ ಕಥನವನ್ನು ಬರೆದರು. ಇದು ಅವರ ಎರಡನೇ ಪ್ರವಾಸ ಕಥನ, 1973ರಲ್ಲಿ ಮುದ್ರಿತಗೊಂಡ ಪಾತಾಳಕ್ಕೆ ಪಯಣ ಇದು ಅವರ ಮೂರನೇ ಪ್ರವಾಸ ಕಥನವಾಗಿದೆ. ಇದು ಒಂದು ಸಣ್ಣ ಕಥೆ ಹಾಗೆಯೇ ಇದು ಅಮೇರಿಕಾದ ಒಂದು ವಿಹಂಗಮ ನೋಟ ಎಂದು ಸ್ವತಃ ಕಾರಂತರೇ ಹೇಳಿಕೊಂಡಿದ್ದಾರೆ. 


          ಅಮೇರಿಕಾ ಸಂಯುಕ್ತ ಪ್ರಾಂತ್ಯಕ್ಕೆ ಹೋಗಿ ಬಂದ ಒಂದೆರಡು ತಿಂಗಳ ಅವಧಿಯಲ್ಲಿ ಪಾತಾಳಕ್ಕೆ ಪಯಣ ಎಂಬ ಮೂರನೇ ಪ್ರವಾಸಕಥನವನ್ನು ಬರೆದರು. ಅವರು ನೋಡಿದ ಬೃಹತ್ ದೇಶವಾದ ಯುನೈಟೆಡ್ ಸ್ಟೇಟ್ಸ್‍ನ ಸಣ್ಣ ಮಟ್ಟಿನ ಪರಿಚಯವನ್ನು ಈ ಲೇಖನದಲ್ಲಿ ತಿಳಿಸುತ್ತಾರೆ. ಒಟ್ಟು ಹದಿನಾಲ್ಕು ಸಣ್ಣ ಸಣ್ಣ ಅಧ್ಯಾಯದಲ್ಲಿ ಇಡೀ ಅಮೇರಿಕಾವನ್ನು ಕಣ್ಣಮುಂದಿರಿಸಿದ್ದಾರೆ. ಡಾ ಕೆ ಶಿವರಾಮ ಕಾರಂತರು ಅವರು ಅಮೇರಿಕಾಕ್ಕೆ ಮೊದಲು ಬಂದಾಗ ಅದು ಜಂಬೋ ಜೆಟ್ ಆರಂಭವಾದ ಕಾಲದಲ್ಲಿ ಅಮೇರಿಕಾ ಪ್ರವಾಸ ಕೈಗೊಂಡರು. ಜಂಬೋ ಜೆಟ್ ?ದುಸ್ಥಿತಿ ಏನಿತ್ತೆಂದರೆ ವಿದೇಶೀ ವಿಮಾನಗಳ ರಿಯಾಯಿತಿ ದರದ ಎದುರು ಜಂಬೋ ಜೆಟ್ ಜನರನ್ನು ಆಕರ್ಷಿಸಲು ಊರಿಗೆ ಸರ್ಕಸ್ ಬಂದಾಗ ಗಿರಾಕಿ ಸಾಲದ ಸರ್ಕಸ್ಸಿನವರು ಶಾಲಾ ಮಕ್ಕಳಿಗೆ ಅರ್ಧ ಚಾರ್ಜು ಅಂದಹಾಗಾಯಿತು. ಎಂದು ವ್ಯಂಗ್ಯವಾಗಿ ತಿಳಿಸಿ ಬರೆದಿದ್ದಾರೆ. ಜಂಬೋ ಸವಾರಿ ಯೋಗ ಹೀಗೆ ಅವರು ಬರೆದ ಹದಿನಾಲ್ಕು ಅಧ್ಯಾಯದಲ್ಲೂ ಶಿವರಾಮ ಕಾರಂತರು ವ್ಯಂಗ್ಯವಾಗಿ ಬರೆಯುತ್ತಾರೆ.

            ಹೀಗೆ ಅವರು ನ್ಯೂಯಾರ್ಕ್ ನಲ್ಲಿ ಕಳೆದ ಸಮಯವನ್ನು ಅವರು ಇಲ್ಲಿ ವಿವರವಾಗಿ ಬರೆದಿದ್ದಾರೆ. ನ್ಯೂಯಾರ್ಕ್ ನಲ್ಲಿ ಇರುವ ಕಲ್ಚರ್ ಕುರಿತಾಗಿ ಮತ್ತು ಅಲ್ಲಿನ ಎಲ್ಲಾ ವಿಷಯಗಳನ್ನು ನ್ಯೂಯಾರ್ಕ್ ನಲ್ಲಿ ಮತ್ತು ನ್ಯೂಯಾರ್ಕ್ ನಲ್ಲಿ ಇನ್ನಷ್ಟು ಸಮಯ ಎನ್ನುವ  ಲೇಖನದಲ್ಲಿ ವಿವರಿಸುತ್ತಾರೆ.ಹೀಗೆ ಅವರು ತಮ್ಮ ಪುಸ್ತಕದಲ್ಲಿ ಬರೆದ ಎಲ್ಲಾ ಕಥೆಗಳು ಒಂದಲ್ಲ ಒಂದು ರೋಚಕ ಸಂಗತಿಯನ್ನು ಒಳಗೊಂಡಿದೆ. ಹೀಗೆ ಕಥೆಗಳನ್ನು ಓದುತ್ತಾ ಅಲ್ಲಿನ ಹಲವಾರು ವಿಷಯಗಳು ತಿಳಿಯುತ್ತಾ ಹೋಗುತ್ತದೆ. ಹೀಗೆ ಹಲವಾರು ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಬಹುದು. ಆದ್ದರಿಂದ ಕಾರಂತರ  ಪಾತಾಳಕ್ಕೆ ಪಯಣ ಎಂಬ ಪುಸ್ತಕವು ಒಂದು ಅತ್ಯುತ್ತಮ ಕೃತಿ ಓದಿದರೆ ಓದಿಸಿಕೊಂಡು ಹೋಗುವ ಲೇಖನವಾಗಿದೆ. ಒಟ್ಟಿನಲ್ಲಿ ಪಾತಾಳಕ್ಕೆ ಪಯಣ ಎಂಬ ಕೃತಿ ಎಲ್ಲರೂ ಓದಲೇಬೇಕಾದ ಒಂದು ಉತ್ತಮ ಕೃತಿಯಾಗಿದೆ.


                                ಪರಿಚಯ:ಬರೆದವರು: ಕಾರ್ತಿಕ್ ಕುಮಾರ್ ಕೆ

                                          ದುರ್ಗಾನಿಲಯ ಏತಡ್ಕ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries