ತಿರುವನಂತಪುರಂ: ಬಿಜೆಪಿ ರಾಜ್ಯಾಧ್ಯಕ್ಷ ಕೆ ಸುರೇಂದ್ರನ್ ಅವರು ರಾಷ್ಟ್ರ ಧ್ವಜವನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಲಾಗಿದೆ. ದೂರುದಾರ ಸಿಪಿಐ (ಎಂ) ಪಾಳಯಂ ಪ್ರದೇಶ ಸಮಿತಿ ಸದಸ್ಯ ಆರ್. ಪ್ರದೀಪ್. ಈ ಆರೋಪ ಮಾಡಿದ್ದು, ಕೆ ಸುರೇಂದ್ರನ್ ಅವರು ರಾಷ್ಟ್ರ ಧ್ವಜವನ್ನು ತಲೆಕೆಳಗಾಗಿ ಹಾರಿಸಿದ್ದಾರೆ ಎಂದು ಆರೋಪಿಸಿ ಪೋಲೀಸರಿಗೆ ದೂರು ನೀಡಿದ್ದಾರೆ.
ದೂರಿನಲ್ಲಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮ್ಯೂಸಿಯಂ ಪೋಲೀಸರು ತಿಳಿಸಿದ್ದಾರೆ. ಬಿಜೆಪಿ ರಾಜ್ಯ ಸಮಿತಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಿಜೆಪಿ ಅಧ್ಯಕ್ಷರು ಧ್ವಜಾರೋಹಣಗೈಯ್ದ ವೇಳೆ ಈ ಅವಾಂತರ ನಡೆಯಿತು ಎನ್ನಲಾಗಿದೆ.
ಮೊದಲು ತಲೆಕೆಳಗಾಗಿ ಹಾರಿಸಿದ ಧ್ವಜವನ್ನು ತಪ್ಪಾಗಿರುವುದು ಅರಿತು ಕೆಳ ಇಳಿಸಲಾಯಿತು. ನಂತರ ಮತ್ತೆ ಏರಿಸಿ ಸಮಸ್ಯೆಯನ್ನು ಸರಿಪಡಿಸಿದರು. ಆದರೆ ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮಗಳಲ್ಲಿ ಸುರೇಂದ್ರನ್ ವಿರುದ್ಧ ಟೀಕೆಗಳು ವ್ಯಕ್ತಗೊಂಡವು.





