ಪತ್ತನಂತಿಟ್ಟ: ನಿರಪುತ್ತರಿ ಮತ್ತು ಸೋಣೆ ತಿಂಗಳ ಪೂಜೆಗಳು ಮತ್ತು ಓಣಂ ಪೂಜೆಗಳಿಗಾಗಿ ಶಬರಿಮಲೆ ಗರ್ಭಗೃಹದ ಬಾಗಿಲು ಭಾನುವಾರ ಸಂಜೆ ತೆರೆಯಲಾಗಿದೆ. ಮೇಲ್ಶಾಂತಿ ವಿ.ಕೆ ಜಯರಾಜ್ ಪೆÇಟ್ಟಿ ಶ್ರೀಕೋವಿಲ್ ಅವರು ತಂತ್ರಿ ಕಂಠಾರರ್ ಮಹೇಶ್ ಮೋಹನರ್ ಅವರ ನೇತೃತ್ವದಲ್ಲಿ ಗರ್ಭಗೃಹ ತೆರೆಯಲಾಗಿತು. ಇಂದು ನಿರಪುತ್ತರಿ ಪೂಜೆ ನಡೆಯಲಿದೆ.
ಶಬರಿಮಲೆಯಲ್ಲಿ ಬೆಳೆದ ಭತ್ತದ ಕಟ್ಟುಗಳನ್ನು ನಿರಪುತ್ತÀರಿ ಪೂಜೆಗೆ ಬಳಸಲಾಗುತ್ತದೆ. ಇಂದಿನಿಂದ 23 ನೇ ತಾರೀಖಿನವರೆಗೆ ಭಕ್ತರಿಗೆ ದೇಗುಲ ದರ್ಶನಕ್ಕೆ ಅವಕಾಶವಿದೆ. ಓಣಂ ದಿನಗಳಲ್ಲಿ ಕೋವಿಡ್ ಪೆÇ್ರೀಟೋಕಾಲ್ ನ್ನು ಅನುಸರಿಸಿ ಭಕ್ತರಿಗೆ ಓಣಂ ಔತಣ ನೀಡಲಾಗುತ್ತದೆ. ಗರ್ಭಗೃಹ 23 ರ ಸಂಜೆ ಮುಚ್ಚಲಿದೆ.





