ಉಪ್ಪಳ: ಸ್ವಾತಂತ್ರ್ಯದ 75ನೇ ವರ್ಷಾಚರಣೆ ಅಂಗವಾಗಿ ಭಾರತೀಯ ಯುವ ಕಾಂಗ್ರೆಸ್ಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಕೈಕಂಬದಿಂದ ಉಪ್ಪಳದ ವರೆಗೆ ವರ್ಣ ಬೇಧ ನೀತಿ ಮತ್ತು ತೆರಿಗೆ ಭಯೋತ್ಪಾದನೆಗೆ ಎದುರಾಗಿ ಕಾಲ್ನಡಿಗೆ ಜಾಥಾ ನಡೆಯಿತು. ಕೆಪಿಸಿಸಿ ಕಾರ್ಯದರ್ಶಿ ನ್ಯಾಯವಾದಿ ಸುಬ್ಬಯ್ಯ ರೈ ಅವರು ಜಾಥ ಪತಾಕೆಯನ್ನು ಯುವ ಕಾಂಗ್ರೆಸ್ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಇರ್ಷಾದ್ ಮಂಜೇಶ್ವರ ಇವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಾಡಿದ ತ್ಯಾಗ ಬಲಿದಾನಗಳನ್ನು ನೆನಪಿಸಲಾಯಿತು. ಸಮಾರೋಪದಲ್ಲಿ ಮಾತನಾಡಿದ ಕಾಸರಗೋಡು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಅವರು ಯುವ ಕಾಂಗ್ರೆಸ್ ಫ್ಯಾಸಿಸ್ಟ್ ಶಕ್ತಿಗಳು ನಡೆಸುವ ವರ್ಣಭೇದ ನೀತಿ ಮತ್ತು ತೆರಿಗೆ ಭಯೋತ್ಪಾದನೆಯ ವಿರುದ್ಧ ಕೊನೆಯವರೆಗೆ ಹೊರಾಟ ನಡೆಸುವುದು ಶತಸಿದ್ಧ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಮಂಜೇಶ್ವರ ಬ್ಲಾಕ್ ಕಾರ್ಯದರ್ಶಿಗಳಾದ ನಾಗೇಶ್ ಮಂಜೇಶ್ವರ,ಯೋಗೇಶ್ ಮಂಜೇಶ್ವರ, ಹನೀಫ್ ಮೇರ್ಕಳ, ಓಂಕೃಷ್ಣ, ಮಂಡಲ ಅಧ್ಯಕ್ಷ ಸತ್ಯನ್ ಸಿ. ಉಪ್ಪಳ, ಯುವ ಕಾಂಗ್ರೆಸ್ ಮಂಗಲ್ಪಾಡಿ ಮಂಡಲ ಅಧ್ಯಕ್ಷ ಹುಸೇನ್ ಕುಬಣೂರು, ಶರೀಫ್ ಆರಿಕ್ಕಾಡಿ, ಎಣ್ಮಕಜೆಯ ಅಧ್ಯಕ್ಷ ನಿಸಾರ್, ಕತಾರ್ ಅನಿವಾಸಿ ಕಾಂಗ್ರೆಸ್ಸ್ ನೇತಾರ ಮಮ್ಮುಂಇ, ಹಾಗೂ ಭರತರಾಜ್ ಪೈವಳಿಕೆ, ಶರೀಫ್ ಅರಿಬೈಲ್, ಸಚ್ಚಿದಾನಂದ ರೈ ಪೈವಳಿಕೆ, ಮೋಹನ ರೈ ಪೈವಳಿಕೆ, ತಮೀಮ್ ಮಂಜೇಶ್ವರ, ಮ್ಯೊದೀನ್ ಮಂಜೇಶ್ವರ ಮುಂತಾದವರು ಯುವ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಜೊತೆಯಾದರು.





