ಕಾಸರಗೋಡು: ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆ.15ರಂದು ಬೆಳಗ್ಗೆ 9 ಗಂಟೆಗೆ ವಿದ್ಯಾನಗರದ ಕಾಸರಗೋಡು ನಗರಸಭೆ ಕ್ರೀಡಾಂಗಣದಲ್ಲಿ ನಡೆಯಲಿದೆ.
ಬಂದರು, ವಸ್ತುಸಂಗ್ರಹಾಲಯ ಸಚಿವ ಅಹಮ್ಮದ್ ದೇವರ್ ಕೋವಿಲ್ ಧ್ವಜಾರೋಹಣ ನಡೆಸುವರು. ಪಥಸಂಚಲನದಲ್ಲಿ ಪೆÇಲೀಸ್, ಅಬಕಾರಿ ದಳಗಳು ಭಾಗವಹಿಸಲಿವೆ.
ಆಹ್ವಾನಿತ 100 ಮಂದಿಗೆ ಮಾತ್ರ ಪ್ರವೇಶ: ಅತೀವ ಕಟ್ಟುನಿಟ್ಟು
ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಅತೀವ ಕಟ್ಟುನಿಟ್ಟುಗಳೊಂದಿಗೆ ಕಾರ್ಯಕ್ರಮ ಜರುಗಲಿದೆ. ಆಹ್ವಾನಿತ 100 ಮಂದಿಗೆ ಮಾತ್ರ ಪ್ರವೇಶಾತಿ ಇರುವುದು. ವಯೋವೃದ್ಧರು ಮತ್ತು ಮಕ್ಕಳಿಗೆ ಪ್ರವೇಶ ನಿಷೇಧಿಸಲಾಗಿದೆ. ಪಥಸಂಚಲನದಲ್ಲಿ ಎನ್.ಸಿ.ಸಿ., ಎಸ್.ಪಿ.ಸಿ., ಸ್ಕೌಟ್ ಮತ್ತು ಗೈಡ್ಸ್, ಎನ್.ಸಿ.ಸಿ. ಜೂನಿಯರ್ ಡಿವಿಝನ್ ಪ್ಲಾಟೂನ್ ಗಳು ಭಾಗವಹಿಸುವುದಿಲ್ಲ. ಬದಲಾಗಿ ನ್ಯಾಷನ್ ಸೆಲ್ಯೂಟ್ ಮಾತ್ರ ಇರುವುದು. ಮಕ್ಕಳ ದೇಶಭಕ್ತಿ ಗಾಯನ, ಪದಕ ಪ್ರಧಾನ ಇತ್ಯಾದಿ ಸಮಾರಂಭಗಳೂ ಜರುಗುವುದಿಲ್ಲ. ಮೂವರು ವೈದ್ಯರು, ಇಬ್ಬರು ದಾದಿಯರು, ಇಬ್ಬರು ಪಾರಾ ಮೆಡಿಕಲ್ ಸಿಬ್ಬಂದಿ, ಮೂವರು ಶುಚೀಕರಣ ಕಾರ್ಮಿಕರು ಕೋವಿಡ್ ಮುಂಚೂಣಿ ಹೋರಾಟಗಾರರು ಎಂಬ ನೆಲೆಯಲ್ಲಿ ಇರುವರು. ಸಾಂಸ್ಕøತಿಕ ಕಾರ್ಯಕ್ರಮಗಳು ಇರುವುದಿಲ್ಲ. ಆಹ್ವಾನಿತರು ಥರ್ಮಲ್ ಸ್ಕಾನಿಂಗ್ ಗೆ ಒಳಗಾಗಬೇಕು. ಕಟ್ಟಡಾಯವಾಗಿ ಮಾಸ್ಕ್ ಧರಿಸಬೇಕು. ಸಾನಿಟೈಸರ್ ಬಳಸಬೇಕು.




