ಕಾಸರಗೋಡು: ಕೇರಳದಲ್ಲಿ ಓಣಂ ಹಬ್ಬದ ಹಿನ್ನೆಲೆಯಲ್ಲಿ ವಿತರಿಸುತ್ತಿರುವ ಆಹಾರ ಕಿಟ್ ವಿತರಣೆಯಲ್ಲಿ ಭ್ರಷ್ಟಾಚಾರದ ಕೂಗು ಕೇಳಿಬರುತ್ತಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾ ಘಟಕ ಅಧ್ಯಕ್ಷ ಕೆ.ಶ್ರೀಕಾಂತ್ ಆರೋಪಿಸಿದ್ದಾರೆ.
ಕಿಟ್ ಮೂಲಕ ವಿತರಿಸಿರುವ ಬೆಲ್ಲದ ಉತ್ಪನ್ನ ತಮ್ಮ ಸಂಸ್ಥೆಗೆ ಸೇರಿದ್ದಲ್ಲ ಎಂಬುದಾಗಿ ಉತ್ಪನ್ನಕ್ಕೆ ಲಗತ್ತಿಸಿದ ಲೇಬಲ್‍ನಲ್ಲಿ ಹೆಸರು ಹೊಂದಿದ ಕುಟುಂಬಶ್ರೀ ಸಂಸ್ಥೆಯೊಂದು ರಂಗಕ್ಕಿಳಿದಿದೆ. ಈ ಹಿನ್ನೆಲೆಯಲ್ಲಿ ಉತ್ಪನ್ನದ ನೈಜ ಸಂಸ್ಥೆಯನ್ನು ಪತ್ತೆಮಾಡುವುದರ ಜತೆಗೆ ನಕಲಿ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಕಳಪೆ ಉತ್ಪನ್ನಗಳನ್ನು ಕಿಟ್‍ನಲ್ಲಿ ನೀಡಲಾಗಿದ್ದು, ನಕಲಿ ಲೇಬಲ್ ಅಳವಡಿಸಿ ವಿತರಿಸಲಾಗುತ್ತಿದೆ. ಈ ಮೂಲಕ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಯುವ ಸಾಧ್ಯತೆಯಿರುವುದಾಗಿ ಶ್ರೀಕಾಂತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.




