ಪೆರ್ಲ: ರಾಜ್ಯ ಸರ್ಕಾರ 1996ರಲ್ಲಿ ಆರಂಭಿಸಿದ ಜನಕೀಯ ಯೋಜನೆ ರಜತ ವರ್ಷಾಚರಣೆಯ ಅಂಗವಾಗಿ ರಾಜ್ಯ ಮಟ್ಟದಲ್ಲಿ ಒಂದು ವರ್ಷಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಇದರಂತೆ ಎಣ್ಮಕಜೆ ಪಂಚಾಯತಿನಲ್ಲೂ ವಿಪುಲವಾದ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಆ. 17ರಂದು ರಾಜ್ಯ ಮಟ್ಟದ ಉದ್ಘಾಟನೆಯ ಜೊತೆಗೆ ಪಂಚಾಯತು ಮಟ್ಟದ ಕಾರ್ಯಕ್ರಮಕ್ಕೂ ಚಾಲನೆ ನೀಡಲಾಗುತ್ತದೆ. ಈ ಬಗ್ಗೆ ಪಂಚಾಯತಿ ಸಭಾಂಗಣದಲ್ಲಿ ನಡೆದ ಸ್ವಾಗತ ಸಮಿತಿ ರೂಪೀಕರಣ ಸಭೆಯು ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ಜರಗಿತು. ಜನಕೀಯ ಯೋಜನೆ ರಜತ ವರ್ಷಾಚರಣೆಯ ಅಂಗವಾಗಿ ಕಳೆದ 25 ವರ್ಷ ಸೇವೆ ಸಲ್ಲಿಸಿದ ಮಾಜಿ ಅಧ್ಯಕ್ಷರು,ಉಪಾಧ್ಯಕ್ಷ ಹಾಗೂ ವಾರ್ಡ್ ಸದಸ್ಯರಿಗೆ ಗೌರವಾಭಿನಂದನೆ ಸಲ್ಲಿಸಲು, ಜನಕೀಯ ಯೋಜನೆ ಬಗ್ಗೆ ವಿಶೇಷ ಉಪನ್ಯಾಸ, ವಿಚಾರಗೋಷ್ಠಿಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ನಾರಾಯಣ ನಾಯ್ಕ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್,ಜಯಶ್ರೀ ಕುಲಾಲ್, ಸೌದಾಭಿ ಹನೀಫ್, ಪಂ.ಸದಸ್ಯರಾದ ಮಹೇಶ್ ಭಟ್, ಶಶಿಧರ್, ಇಂದಿರಾ, ರಾಮಚಂದ್ರ ಎಂ, ನರಸಿಂಹ ಪೂಜಾರಿ, ರೂಪವಾಣಿ ಆರ್.ಭಟ್, ಕುಸುಮಾವತಿ.ಬಿ, ಝರಿನಾ ಮುಸ್ತಾಫ, ಉಷಾ ಗಣೇಶ್, ಆಶಾಲತಾ ಹಾಗೂ ಪಂ.ಕಾರ್ಯದರ್ಶಿ ಅಚ್ಚುತ ಮಣಿಯಾಣಿ,ಹೆಡ್ ಕ್ಲಾರ್ಕ್ ಪ್ರೇಮ್ ಚಂದ್, ವಿವಿಧ ಪಕ್ಷ ಸಂಘಟನೆಗಳ ನೇತಾರರಾದ ಅಬೂಬಕ್ಕರ್ ಪೆರ್ದನೆ, ವಿನೋದ್ ಪೆರ್ಲ, ಪಿ.ಎಸ್. ಕಡಂಬಳಿತ್ತಾಯ ,ವ್ಯಾಪಾರಿ ಏಕೋಪನ ಸಮಿತಿಯ ರಾಮ್ ಭಟ್ ಮೊದಲಾದವರು ಭಾಗವಹಿಸಿದ್ದರು.


