ಕೊಚ್ಚಿ: ಇ-ಬುಲ್ಜೆಟ್ ಹೆಸರಿನಲ್ಲಿ ಕಾನೂನುಬಾಹಿರವೆಂದು ವಾಹನಗಳನ್ನು ವಶಪಡಿಸಿಕೊಳ್ಳುವುದರ ವಿರುದ್ದ ಸಾಮಾಜಿಕ ಮಾಧ್ಯಮಗಳಲ್ಲಿ ಬಿಸಿ ಚರ್ಚೆ ರಂಗೇರುತ್ತಿದೆ. ಅನೇಕ ಸ್ಥಳಗಳಲ್ಲಿ ಇದೇ ರೀತಿಯ ಉಲ್ಲಂಘನೆಗಳನ್ನು ಹೆಚ್ಚು ಚರ್ಚಿಸಲಾಗಿದೆ. ಅಂತಹ ಚರ್ಚೆಯ ಸಮಯದಲ್ಲಿ ಕಾಣಿಸಿಕೊಂಡ ಚಿತ್ರ ಮತ್ತು ಪ್ರಶ್ನೆಯು ಮೋಟಾರ್ ವಾಹನಗಳ ಇಲಾಖೆಯನ್ನೂ ಪೇಚಿಗೆ ಸಿಲುಕಿಸಿದೆ.
ವಾಹನಗಳ ಹಿಂಭಾಗದ ಗಾಜಿನ ಮೇಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಿತ್ರವಿರುವ ಖಾಸಗಿ ಬಸ್ಸಿನ ಚಿತ್ರ ಚರ್ಚೆಯಲ್ಲಿ ಭಾರೀ ಸದ್ದುಮಾಡಿತು. ಇ-ಬುಲೆಟ್ ನ ಹೆಸರಲ್ಲಿ ಸತಾಯಿಸುವಿಕೆ ನಿಲ್ಲಲಿ; ಈ ವಾಹನದ ವಿರುದ್ಧ ನೇತಾರರು ಯಾವ ಕ್ರಮ ಕೈಗೊಳ್ಳುವರು ಎಂಬ ಪ್ರಶ್ನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಲಾಗಿದೆ. ಅದೂ ಕಣ್ಣೂರು-ಇರಿಟ್ಟಿ ಮಾರ್ಗದಲ್ಲಿ ಓಡುತ್ತಿರುವ ಆಶಿಕ್ ಎಂಬ ಬಸ್ ನ ಚಿತ್ರದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಚಿತ್ರವನ್ನು ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ಚರ್ಚಿಸಲಾಗಿದೆ.
ಸ್ಟಿಕ್ಕರ್‍ಗಳನ್ನು ಅಂಟಿಸುವುದು ಸೇರಿದಂತೆ ಮೋಟಾರ್ ವಾಹನ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಯೂಟ್ಯೂಬರ್ಸ್ ಸಹೋದರರ ವಿರುದ್ಧ ಮೋಟಾರು ವಾಹನಗಳ ಇಲಾಖೆ ಕ್ರಮ ಕೈಗೊಂಡಿದೆ. ಆದರೆ ಖಾಸಗಿ ಬಸ್ ಸೇರಿದಂತೆ ಇಂತಹ ಉಲ್ಲಂಘನೆಗಳು ಸಾಮಾನ್ಯ ಎಂದು ವಿಮರ್ಶಕರು ಹೇಳುತ್ತಾರೆ.





