HEALTH TIPS

ಎಡನೀರಲ್ಲಿ ಸಿರಿಬಾಗಿಲು ಪ್ರತಿಷ್ಠಾನದಿಂದ ಯಕ್ಷಪಂಚಕ ಆರಂಭ

               ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನವು ಸಾಂಸ್ಕøತಿಕವಾಗಿ ಯಕ್ಷಗಾನ ಕ್ಷೇತ್ರಕ್ಕೆ ಉತ್ತಮವಾದ ಪ್ರಯೋಗಾತ್ಮಕ ಚಟುವಟಿಕೆಗಳ ಮೂಲಕ ಸ್ತುತ್ಯರ್ಹ ಸೇವೆ ನೀಡುತ್ತಿದೆ. ಕಲೆಯನ್ನು ಉಳಿಸುವ ದೃಷ್ಟಿಯಿಂದ ಪ್ರದರ್ಶನಗಳು ಏರ್ಪಡುತ್ತವೆ. ಆದರೆ ಕಲೆಯನ್ನು ಬೆಳೆಸುವ ದೃಷ್ಟಿಯಿಂದ ಪ್ರಯೋಗಗಳು ಅಗತ್ಯವಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಬೆಳೆಸುವಲ್ಲಿ ಪ್ರತಿಷ್ಠಾನ ಮುಂಚೂಣಿಯಲ್ಲಿದೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.


             ಶ್ರೀಮದ್ ಎಡನೀರು ಮಠದಲ್ಲಿ ನಡೆಯುತ್ತಿರುವ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪ್ರಥಮ ಚಾತುರ್ಮಾಸ್ಯ ಹಾಗೂ ಬ್ರಹ್ಮಕೈ ಶ್ರೀಕೇಶವಾನಂದ ಭಾರತೀ ಶ್ರೀಗಳ ಸ್ಮøತಿ ಕಾರ್ಯಕ್ರಮದ ಅಂಗವಾಗಿ ನಡೆಯುತ್ತಿರುವ ವಿವಿಧ ಸಾಂಸ್ಕøತಿಕ ಸರಣಿ ಕಾರ್ಯಕ್ರಮಗಳ ಭಾಗವಾಗಿ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನ ಹಮ್ಮಿಕೊಂಡ ಐದು ದಿನಗಳ "ಯಕ್ಷಪಂಚಕ" ಕಾರ್ಯಕ್ರಮಕ್ಕೆ ಸೋಮವಾರ ಸಂಜೆ ಚಾಲನೆ ನೀಡಿ ಮಾತನಾಡಿದರು.


            ಈ ಸಂದರ್ಭ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ರಾಧಾಕೃಷ್ಣ ಕಲ್ಚಾರ್ ಬ್ರಹ್ಮಕ್ಯ ಶ್ರೀಕೇಶವಾನಂದ ಭಾರತೀ ಶ್ರೀಗಳ ಸಂಸ್ಮರಣೆ ನಡೆಸಿದರು.

         ಎಡನೀರು ಮಠದ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ರ ಕಲ್ಲೂರಾಯ ಎಡನೀರು, ಚಾತುರ್ಮಾಸ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಬ್ರಹ್ಮಶ್ರೀರವಿಶ ತಂತ್ರಿ ಕುಂಟಾರು,  ಸಿರಿಬಾಗಿಲು ಸಾಂಸ್ಕøತಿಕ ಪ್ರತಿಷ್ಠಾನದ ಶಂಕರನಾರಾಯಣ ಮಯ್ಯ, ಪ್ರತಿಷ್ಠಾನದ ರೂವಾರಿ ಭಾಗತವ ಸಿರಿಬಾಗಿಲು ರಾಮಕೃಷ್ಣ ಮಯ್ಯ, ಪ್ರತಿಷ್ಠಾನದ ಸದಸ್ಯರು ಉಪಸ್ಥಿತರಿದ್ದರು. ರಾಜಾರಾಮ ರಾವ್ ಮೀಯಪದವು ಸ್ವಾಗತಿಸಿ, ನಿರೂಪಿಸಿದರು. ಬಳಿಕ ಪ್ರಸಿದ್ದ ಕಲಾವಿದ ಕೂಡವಿಕೆಯಲ್ಲಿ ಕಾಯಕಲ್ಪ ಆಖ್ಯಾಯಿಕೆಯ ತಾಳಮದ್ದಳೆ ನಡೆಯಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries