HEALTH TIPS

ಸೆಪ್ಟೆಂಬರ್ ತಿಂಗಳಲ್ಲಿ ದೇಶದ ವಿವಿಧ ರಾಜ್ಯಗಳ ಬ್ಯಾಂಕು ರಜೆ ದಿನ ಪಟ್ಟಿ

               ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿ ಐ) ಸೆಪ್ಟೆಂಬರ್ ತಿಂಗಳ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಆಗಸ್ಟ್ ತಿಂಗಳಲ್ಲಿ ಹಲವು ರಾಜ್ಯಗಳಲ್ಲಿ ಕೊವಿಡ್ 19 ಕರ್ಫ್ಯೂ, ಲಾಕ್ ಡೌನ್ ಮುಗಿದಿದ್ದು, ಅನ್ ಲಾಕ್ ಪ್ರಕ್ರಿಯೆ ಜಾರಿಯಲ್ಲಿದೆ. ಕೆಲವೆಡೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಆದರೆ, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾತ್ರ ಜುಲೈ ತಿಂಗಳಂತೆ ಆಗಸ್ಟ್ ತಿಂಗಳಲ್ಲೂ ಕಡಿಮೆ ರಜೆ ದಿನಗಳಿತ್ತು. ಆದರೆ, ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬದ ದೆಸೆಯಿಂದ ಹೆಚ್ಚಿನ ರಜೆ ನಿರೀಕ್ಷಿಸಲಾಗಿದೆ.

              ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಹಾಗೂ ಸಹಕಾರಿ ಬ್ಯಾಂಕ್ ಸೇರಿದಂತೆ ಪ್ರಾದೇಶಿಕ ಬ್ಯಾಂಕುಗಳು ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾ ದಿನವಿರಲಿದೆ.

            ಪ್ರತಿ ವರ್ಷ ಗಣರಾಜ್ಯದಿನ (ಜನವರಿ 26), ಸ್ವಾತಂತ್ರ್ಯೋತ್ಸವ ದಿನ (ಆಗಸ್ಟ್ 15) ಹಾಗೂ ಗಾಂಧಿ ಜಯಂತಿ (ಅಕ್ಟೋಬರ್ 02) ದಿನದಂದು ಸರ್ಕಾರಿಸ್ವಾಮ್ಯದ ಕಚೇರಿ, ಬ್ಯಾಂಕ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳಿಗೂ ರಜಾ ದಿನವಿರಲಿದೆ. ಅಸ್ಸಾಂನ ಬಿಹು, ಕೇರಳ ಓಣಂ ಸೇರಿದಂತೆ ಪ್ರಾದೇಶಿಕ ಹಬ್ಬಗಳ ದಿನದಂದು ಆಯಾ ರಾಜ್ಯಗಳಲ್ಲಿ ಬ್ಯಾಂಕ್ ಕಾರ್ಯ ನಿರ್ವಹಿಸುವುದಿಲ್ಲ.

ಗಮನಿಸಿ: ಕರ್ನಾಟಕದಲ್ಲಿ ಗಣೇಶ ಚತುರ್ಥಿಗೆ ಒಂದು ದಿನ ಮಾತ್ರ ರಜೆ ಲಭ್ಯವಾಗಲಿದೆ. ಮಿಕ್ಕಂತೆ ವಿವಿಧ ರಾಜ್ಯಗಳ ರಜಾ ದಿನಗಳ ಬಗ್ಗೆ ವಿವರ ಮುಂದಿದೆ..

                                  ಸೆಪ್ಟೆಂಬರ್ 2021ರಲ್ಲಿ ಬ್ಯಾಂಕ್ ರಜಾ ದಿನ

ಸೆಪ್ಟೆಂಬರ್ 2021ರಲ್ಲಿ ಬ್ಯಾಂಕ್ ರಜಾ ದಿನ
ದಿನದಿನಾಂಕರಜಾ ದಿನನಗರ
ಸೆಪ್ಟೆಂಬರ್ 5, 2021ಭಾನುವಾರವಾರದ ರಜೆದೇಶದೆಲ್ಲೆಡೆ
ಸೆಪ್ಟೆಂಬರ್ 8ಬುಧವಾರಶಂಕರದೇವ ತಿಥಿಗುವಾಹಟಿ
ಸೆಪ್ಟೆಂಬರ್ 9ಗುರುವಾರತೀಜ್ (ಹರಿತಾಲಿಕಾ)ಗ್ಯಾಂಗ್ ಟಕ್
ಸೆಪ್ಟೆಂಬರ್ 10ಶುಕ್ರವಾರಗಣೇಶ ಚತುರ್ಥಿಬೆಂಗಳೂರು, ಅಹಮದಾಬಾದ್, ಬೇಲಾಪುರ್, ಭುವನೇಶ್ವರ್, ಚೆನ್ನೈ, ಹೈದರಾಬಾದ್, ಮುಂಬೈ, ಪಣಜಿ
ಸೆಪ್ಟೆಂಬರ್ 11ಶನಿವಾರ2ನೇ ಶನಿವಾರ/ ಗಣೇಶ ಪಂಚಮಿಪಣಜಿ
ಸೆಪ್ಟೆಂಬರ್ 12ಭಾನುವಾರವಾರದ ರಜೆದೇಶದೆಲ್ಲೆಡೆ
ಸೆಪ್ಟೆಂಬರ್ 17ಶುಕ್ರವಾರಕರ್ಮ ಪೂಜಾರಾಂಚಿ
ಸೆಪ್ಟೆಂಬರ್ 19ಭಾನುವಾರವಾರದ ರಜೆದೇಶದೆಲ್ಲೆಡೆ
ಸೆಪ್ಟೆಂಬರ್ 20ಸೋಮವಾರಇಂದ್ರಜಾತ್ರಾಗ್ಯಾಂಗ್ ಟಕ್
ಸೆಪ್ಟೆಂಬರ್ 21ಮಂಗಳವಾರಶ್ರೀನಾರಾಯಣ ಗುರು ಸಮಾಧಿ ದಿನಕೊಚ್ಚಿ, ತಿರುವನಂತಪುರಂ
ಸೆಪ್ಟೆಂಬರ್ 25ಶನಿವಾರ4ನೇ ಶನಿವಾರಭಾರತದೆಲ್ಲೆಡೆ
ಸೆಪ್ಟೆಂಬರ್ 26ಭಾನುವಾರವಾರದ ರಜೆದೇಶದೆಲ್ಲೆಡೆ

           ಇದಲ್ಲದೆ, ಸೆಪ್ಟೆಂಬರ್ 9ರಂದು ಗೌರಿ ತೃತಿಯಾ ಹಬ್ಬದ ಸಂದರ್ಭದಲ್ಲಿ ನಿರ್ಬಂಧಿತ ರಜೆ, ಸೆಪ್ಟೆಂಬರ್ 19 ರಂದು ಅನಂತ ಚತುರ್ದಶೀ, ನೋಂಪು ದಿನದಂದು ಬ್ಯಾಂಕ್ ಸಿಬ್ಬಂದಿ ರಜೆ ಮೇಲೆ ಹೋಗುವ ಸಂದರ್ಭ ಒದಗಬಹುದು. ಕೊರೊನಾವೈರಸ್ ಸಾಂಕ್ರಾಮಿಕ ನಿರ್ಬಂಧ ಮಾರ್ಗಸೂಚಿ ನಡುವೆಯೂ ಆನ್ ಲೈನ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಎಂದಿನಂತೆ ಸಕ್ರಿಯವಾಗಿರಲಿದೆ ಎಂದು ಆರ್ ಬಿ ಐ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries