HEALTH TIPS

ಮಾರ್ನಿಂಗ್ ಬ್ರೇಕ್ ಫಾಸ್ಟ್ ಗೆ ತೆಂಗಿನಕಾಯಿ ದೋಸೆ ಸಕತ್ ರೆಸಿಪಿ

                  ಇಷ್ಟು ದಿನ ತೆಂಗಿನಕಾಯಿ ಚಟ್ನಿ ತಿಂದಿರ್ತೀರಾ, ಆದರೆ, ತೆಂಗಿನ ಕಾಯಿ ದೋಸೆಯನ್ನ ಯಾವತ್ತಾದರೂ ಟೇಸ್ಟ್ ಮಾಡಿದ್ದೀರಾ?. ಇಲ್ಲ ತಾನೇ, ಹಾಗಾದ್ರೆ, ಈ ರೆಸಿಪಿ ನಿಮಗಾಗಿ. ಪ್ರತಿಸಲ, ಅದೇ ಉದ್ದಿನ ದೋಸೆ ತಿಂದು ಬೋರಾಗಿದ್ರೆ ಈ ತೆಂಗಿನ ಕಾಯಿ ದೋಸೆ ಟ್ರೈ ಮಾಡಿ. ಮಕ್ಕಳಿಂದ ಹಿಡಿದು, ಪ್ರತಿಯೊಬ್ಬರೂ ಇಷ್ಟಪಟ್ಟು ತಿನ್ನುವ ಬೆಳಗ್ಗಿನ ಉಪಹಾರವಿದು. ಇದರ ಹಿಟ್ಟು ಹದ ಬರಬೇಕಾಗಿರೋದ್ರಿಂದ ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

                    
                   ಬೇಕಾಗುವ ಸಾಮಾಗ್ರಿಗಳು: 2 ಕಪ್ ಅಕ್ಕಿ 1 ಚಮಚ ಮೆಂತ್ಯೆ 1 ಕಪ್ ತೆಂಗಿನಕಾಯಿ 1 ಕಪ್ ಅವಲಕ್ಕಿ 1 ಚಮಚ ಉಪ್ಪು
            ತಯಾರಿಸುವ ವಿಧಾನ: ಮೊದಲನೆಯದಾಗಿ, ಒಂದು ಬೌಲ್ ಗೆ 2 ಕಪ್ ಅಕ್ಕಿ ಮತ್ತು 1 ಮೆಂತ್ಯೆ ಹಾಕಿ, 4 ಗಂಟೆಗಳ ಕಾಲ ನೆನೆಸಿ. ತದನಂತರ, ಇವುಗಳನ್ನು ಮಿಕ್ಸಿ ಜಾರ್ ಗೆ ಹಾಕಿ, ನಯವಾದ ಹಿಟ್ಟು ತಯಾರಿಸಿ, ಬೌಲ್ ಗೆ ಹಾಕಿ ಆಮೇಲೆ ಮಿಕ್ಸಿಗೆ, 1 ಕಪ್ ತೆಂಗಿನಕಾಯಿ ಮತ್ತು 1 ಕಪ್ ನೀರು ಹಾಕಿ, ರುಬ್ಬಿಕೊಂಡು, ಅಕ್ಕಿಹಿಟ್ಟಿನ ಬಟ್ಟಲಿಗೆ ಸೇರಿಸಿ. ಎರಡು ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿ, 8 ಗಂಟೆಗಳ ಕಾಲ ಮುಚ್ಚಿಡಿ. ಇದು ರಾತ್ರಿ ರುಬ್ಬಿಟ್ಟು ಬೆಳಗ್ಗೆ ಮಾಡುವುದು ಉತ್ತಮ. ನಂತರ ಇದಕ್ಕೆ 1 ಟೀಸ್ಪೂನ್ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ತವಾ ಬಿಸಗಿಟ್ಟು, ಅದು ಬಿಸಿಯಾದ ನಂತರ, ದೋಸೆ ಹಾಕಿ, ಮುಚ್ಚಿ. ಲೋ ಫ್ಲೇಮ್ ನಲ್ಲಿ ದೋಸೆಯ ಮೇಲ್ಭಾಗ ಸಂಪೂರ್ಣವಾಗಿ ಬೇಯುವವರೆಗೆ ಬೇಯಿಸಿ. ಇದೀಗ, ತೆಂಗಿನಕಾಯಿ ಚಟ್ನಿಯೊಂದಿಗೆ ತೆಂಗಿನಕಾಯಿ ದೋಸೆ ಸವಿಯಲು ಸಿದ್ಧ.
               NUTRITIONAL INFORMATION  2 ಕ್ಯಾಲೋರಿಗಳು - 82 ಕೆ.ಸಿ.ಎಲ್ ಕೊಬ್ಬು - 1 ಗ್ರಾಂ ಕಾರ್ಬೋಹೈಡ್ರೇಟ್ಗಳು - 15 ಗ್ರಾಂ ಪ್ರೋಟೀನ್ - 1 ಗ್ರಾಂ




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries