ಕಾಸರಗೋಡು: ರಾಜ್ಯ ಸರಕಾರದ 100 ದಿನಗಳ ಕ್ರಿಯಾ ಯೋಜನೆ: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಆರೋಗ್ಯ ರಂಗದಲ್ಲಿ 7.13 ಕೋಟಿ ರೂ.ನ ಯೋಜನೆಗಳು ಪೂರ್ತಿಗೊಂಡಿವೆ.
ಕಾಞಂಗಾಡು ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಎಸ್.ಎಸ್.ಡಿ., ಕೇಂದ್ರೀಕೃತ ಆಕ್ಸಿಜನ್ ಪ್ಲಾಂಟ್ ಗಳು ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ಪೂರ್ತಿಗೊಳಿಸಲಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯ ಕಟ್ಟಡ ವಿಭಾಗ ನಿರ್ಮಿಸಿರುವ ನರ್ಕಿಲಕ್ಕಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಉದ್ಘಟನೆಗೆ ಸಿದ್ಧವಾಗಿದೆ. 1,16,73,000 ರೂ. ವೆಚ್ಚದಲ್ಲಿ ಟಾಟಾ ಟ್ರಸ್ಟ್ ಸರಕಾರಿ ಆಸ್ಪತ್ರೆಯಲ್ಲಿ ತ್ಯಾಜ್ಯ ಸಂಸ್ಕರಣೆ ಘಟಕದ ನಿರ್ಮಾಣ ಪೂರ್ತಿಗೊಂಡಿದೆ. ಒಂದು ಕೋಟಿ ರೂ.ವೆಚ್ಚದಲ್ಲಿ ದೇಲಂಪಾಡಿ ಗ್ರಾಮ ಪಂಚಾಯತ್ ನಲ್ಲಿ ಅಡೂರು ಪ್ರಾಥಮಿಕ ಆರೋಗ್ಯ ಕೇಂದ್ರಯ ಕಟ್ಟಡ ನಿರ್ಮಾಣಗೊಂಡಿದೆ. ಮೊಗ್ರಾಲ್ ಸರಕಾರಿ ಯುನಾನಿ ಚಿಕಿತ್ಸಾಲಯಕ್ಕೆ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ.
ಜಿಲ್ಲೆಯ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, ಕುಟುಂಬ ಆರೋಗ್ಯ ಕೇಂದ್ರಗಳನ್ನು ಆದ್ರರ್ಂ ಗುಣಮಟ್ಟಕ್ಕೇರಿಸುವ ನಿಟ್ಟಿನಲ್ಲಿ 18.69 ಕೋಟಿ ರೂ.ನ ಯೋಜನೆಗಳು ಜಾರಿಗೊಳ್ಳಲಿವೆ. ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರ, ಪುತ್ತಿಗೆ ಕುಟುಂಬ ಆರೋಗ್ಯ ಕೇಂದ್ರ, ಅಂಗಡಿಮೊಗರು ಪ್ರಾಥಮಿಕ ಆರೋಗ್ಯ ಕೇಂದ್ರ, ಚಟ್ಟಂಚಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ಚಟ್ಟಂಚಾಲ್ ಪ್ರಾಥಮಿಕ ಆರೋಗ್ಯ ಕೇಂದ್ರ, ವರ್ಕಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಳ್ಳಿಕ್ಕರೆ ಕುಟುಂಬ ಆರೋಗ್ಯ ಕೇಂದ್ರ ಇತ್ಯಾದಿಗಳು ಈ ಸಾಲಿಗೆ ಸೇರಿವೆ.





