ಕಾಸರಗೋಡು: ರಾಜ್ಯ ಸಾಕ್ಷರತಾ ಮಿಷನ್ ನ ಹೈಯರ್ ಸೆಕೆಂಡರಿ ತತ್ಸಮಾನ ಪರೀಕ್ಷೆಯಲ್ಲಿ ಅತ್ತುತ್ತಮ ಅಂಕಗಳಿಸಿದ ಎಂ.ಟಿ.ಪಿ.ರಾಫಿಯಾ ಎಂಬವವರಿಗೆ ಅಭಿನಂದನೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಜರುಗಿತು. ಜಿಲ್ಲಾ ಸಾಕ್ಷರತಾ ಮಿಷನ್ ವತಿಯಿಂದ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಆರೋಗ್ಯ-ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ನ್ಯಾಯವಾದಿ ಎ.ಎಸ್.ಸರಿತಾ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಥಾಯೀ ಸಮಿತಿ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪಿ.ನಂದಕುಮಾರ್ ಸ್ವಾಗತಿಸಿದರು. ಸಾಕ್ಷರತಾ ಜಿಲ್ಲಾ ಸಂಚಾಲಕ ಟಿ.ವಿ.ಶ್ರೀಜನ್ ವಂದಿಸಿದರು.





