ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಎರಡು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ ಹೆಚ್ಚಳವಾಗಿದೆ.
5ಕ್ಕಿಂತ ಅಧಿಕ ಕೋವಿಡ್ ಆಕ್ಟಿವ್ ಕೇಸುಗಳಿರುವ ಕೋಡೋಂ-ಬೇಳೂರು ಗ್ರಾಮ ಪಂಚಾಯತ್ ನ 9ನೇ ವಾರ್ಡ್ ಎರಳಾಲ್ ಟ್ರೈಬಲ್ ಕಾಲನಿ, ಬಳಾಲ್ ಗ್ರಾಮ ಪಂಚಾಯತ್ ನ 11 ನೇ ವಾರ್ಡ್ ವಾಳಯಿಲ್ ಟ್ರೈಬಲ್ ಕಾಲನಿ ಪ್ರದೇಶಗಳನ್ನು ಅಕ್ಟೋಬರ್ 1 ವರೆಗಿನ ಅವಧಿಗೆ ಮೈಕ್ರೋ ಕಂಟೈನ್ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಆದೇಶ ಪ್ರಕಟಿಸಿದರು.
ಈ ಮೂಲಕ ಕಾಸರಗೋಡು ಜಿಲ್ಲೆಯ ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 8 ಆಗಿದೆ. ಕಳ್ಳಾರ್ ಗ್ರಾಮ ಪಂಚಾಯತ್ ನ 8ನೇ ವಾರ್ಡ್ ಒಕ್ಲಾವ್ ಟ್ರೈಬಲ್ ಕಾಲನಿ, ಮಧೂರು ಗ್ರಾಮ ಪಂಚಾಯತ್ ನ 8 ನೇ ವಾರ್ಡ್ ಉದಯಗಿರಿ, ನೀಲೇಶ್ವರ ನಗರಸಭೆಯ 5ನೃ ವಾರ್ಡ್ ಆಲಂಗೀಲ್, ಪಡನ್ನ ಗ್ರಾಮ ಪಂಚಾಯತ್ ನ 8ನೇ ವಾರ್ಡ್ ತಡಿಯನ್ ಕೊವ್ವಲ್, ಪುಲ್ಲೂರು-ಪೆರಿಯ ಗ್ರಾಮ ಪಂಚಾಯತ್ ನ 4ನೇ ವಾರ್ಡ್ 4 ಅಳ್ಳಮಂಡ, ವಾರ್ಡ್ 8 ಮೀಂuಟಿಜeಜಿiಟಿeಜತ್ ಪ್ರದೇಶಗಳು ಮೈಕ್ರೋ ಕಂಟೈನ್ಮೆಂಟ್ ಝೋನ್ ಗಳಾಗಿವೆ. ಇಲ್ಲಿ ಬಿಗಿ ಕಟ್ಟುನಿಟ್ಟು ಜಾರಿಯಲ್ಲಿದೆ.




