ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪ್ರತಿರೋಧ ಲಸಿಕೆ ನೀಡಿಕೆ ವಿಚಾರದಲ್ಲಿ ಮೊದಲ ಡೋಸ್ ಶೇ 94.47 ನಡೆದಿದ್ದು, ಶೇ 100 ಗುರಿಯೊಂದಿಗೆ ಚುರುಕಿನ ಚಟುವಟಿಕೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ತಿಳಿಸಿದರು.
ಜಿಲ್ಲಾ ಮಾಹಿತಿ ಮತ್ತು ಸಂಪರ್ಕ ಇಲಾಖೆ ಕಚೇರಿಯ ಪಿ.ಆರ್.ಛೇಂಬರ್ ನಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲಸಿಕೆ ನೀಡಿಕೆ ಶೇ 95 ಕ್ಕೂ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿರೋಧ ಶಕ್ತಿ ಹೆಚ್ಚಿಸಿಕೊಂಡವರ ಸಂಖ್ಯೆ ಅಧಿಕವಾಗಿದೆ. 18 ರಿಂದ 44 ವರ್ಷದ ನಡುವಿನ ಪ್ರಾಯದ ಮಂದಿಗೆ ಮೊದಲ ಡೋಸ್ ತುರ್ತಾಗಿ ಪೂರ್ತಿಗೊಳಿಸಲು ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆ ಗುರಿಯಿರಿಸಿಕೊಂಡಿದೆ. 45-60 ವರ್ಷದ ನಡುವಿನ ವಯೋಮಾನದ ಮಂದಿಗೆ ಮೊದಲ ಡೋಸ್ (ಶೇ 100)ಪೂರ್ಣವಾಗಿದೆ. 2,56,114 ಮಂದಿಗೆ ಈ ನಿಟ್ಟಿನಲ್ಲಿ ವಾಕ್ಸಿನೇಷನ್ ನಡೆದಿದೆ. ಕೋವಿಡ್ ಪಾಸಿಟಿವ್ ಆಗಿದ್ದವರಲ್ಲಿ 90 ದಿನ ಕಳೆಯದೇ ಇರುವವರಿಗೆ ಮಾತ್ರ ವಾಕ್ಸಿನೇಷನ್ ಬಾಕಿಯಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೊದಲ ಡೋಸ್ ವಾಕ್ಸಿನೇಷನ್ ಶೇ 100 ಆಗಿದೆ. ಈ ನಿಟ್ಟಿನಲ್ಲಿ 1,88,220 ಮಂದಿಗೆ ಲಸಿಕೆ ನೀಡಲಾಗಿದೆ. ಇತರ ರಾಜ್ಯಗಳ ಕಾರ್ಮಿಕರಾದ 9502 ಮಂದಿಗೆಯಲ್ಲಿ 9217 ಮಂದಿಗೆ( ಶೇ 97.82), ಪರಿಶೀಷ್ಟ ಪಂಗಡ ವಲಯದಲ್ಲಿ 59757 ಮಂದಿಯಲ್ಲಿ 57567 ಮಂದಿಗೆ(ಶೇ 97.2) ಲಸಿಕೆ ನಿಡಲಾಗಿದೆ. ಪಾಲಿಯೇಟಿವ್ ರೋಗಿಗಳಲ್ಲಿ ಶೇ 96.54 ಮಂದಿ ಲಸಿಕೆ ಸ್ವೀಕರಿಸಿದ್ದಾರೆ. 18ರಿಂದ 44 ವರ್ಷದ ವಯೋಮಾನದ 5,58,934 ಮಂದಿ (ಶೇ 93.53) ವಾಕ್ಸಿನೇಷನ್ ಪಡೆದಿದ್ದಾರೆ. ಲಸಿಕೆ ಸ್ವೀಕಾರ ಮಾಡುವರಲ್ಲಿ ಹಿಂಜರಿಯುವವರಿಗೆ ಜಾಗೃತಿ ಮೂಡಿಸುವ ಕಾಯಕ ನಡೆಸಲಾಗುವುದು ಎಂದವರು ನುಡಿದರು.
ಗರ್ಭಿಣಿಯರಲ್ಲಿ ದೊಡ್ಡ ಪ್ರಮಾಣದ ಮಂದಿ ವಾಕ್ಸಿನೇಷನ್ ಪಡೆಯದೇ ಉಳಿದಿದ್ದಾರೆ ಎಂದು ವಾಕ್ಸಿನೇಷನ್ ನೋಡೆಲ್ ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ ತಿಳಿಸಿದರು. ಗರ್ಣಿಣಿಯರು ವಾಕ್ಸಿನೇಷನ್ ಸ್ವೀಕಾರ ನಡೆಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹಿತ ಸಂಘಟನೆಗಳು ಸಲಹೆ ಮಾಡಿದ್ದಾರೆ. ವೈದ್ಯರೂ ಲಸಿಕೆ ನಿಡಿಕೆ ಪ್ರಕ್ರಿಯೆಯಯಲ್ಲಿ ಪೂರಕರಾಗಿದ್ದಾರೆ. ಆದರೆ 18 ರಿಂದ 44 ವರ್ಷ ಪ್ರಾಯದ ನಡುವಿನ 17114 ಮಂದಿ ಗರ್ಭಿಣಿಯರಲ್ಲಿ 5001 ಮಂದಿ ಮಾತ್ರ(ಶೆ 31.8) ಈ ವರೆಗೆ ಮೊದಲ ಡೋಸ್ ಸ್ವೀಕಾರ ಮಾಡಿದ್ದಾರೆ. ಪ್ರತಿ ಬುಧವಾರ ಆರೋಗ್ಯ ಕೇಂದ್ರಗಳಲ್ಲಿ ಗರ್ಭಿಣೀಯರಿಗೆ ಮಾತ್ರ ವಾಕ್ಸಿನೇಷನ್ ನೀಡಲಾಗುತ್ತಿದ್ದು, ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ನುಡಿದರು.
ಇತರ ಕೆವು ಕಡೆಗಳಲ್ಲಿ 35000 ಮಂದಿ ಲಸಿಕೆ ಸ್ವೀಕರಿಸಿಲ್ಲ. ಇವರಲ್ಲಿ 29000 ಮಂದಿ ಕೋವಿಡ್ ಪಾಸಿಟಿವ್ ಆಗಿ 90 ದಿನ ಪೂರ್ತಿಗೊಳ್ಳದೇ ಇರುವವರು. ವಾಕ್ಸಿನೇಷನ್ ಕೇಂದ್ರಗಳಲ್ಲಿ ಈಗ ಜನನಿಭಿಡತೆ ಕಡಿಮೆಗೊಳ್ಳುತ್ತಿರುವರಿಂದ ಲಸಿಕೆ ಸ್ವೀಕಾರ ಸುಗಮವಾಗಿ ನಡೆಯುತ್ತಿದೆ. ಸಾಧಾರಣ ಗತಿಯಲ್ಲಿ ಲಸಿಕೆ ಸ್ವೀಕಾರದಿಂದ ಹಿಂದುಳಿದಿರುವ ಮಂದಿಗಳಿರುವ ಪ್ರದೇಶಗಳಲ್ಲಿ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಸಭೆ ಸೇರಿ ತುರ್ತು ಕ್ರಮ ಕೈಗೊಳ್ಳಬೇಕಿದೆ. ಯುವಜನತೆಯನ್ನು ವಾಕ್ಸಿನೇಷನ್ ಡ್ರೈವ್ ನ ಭಾಗಿಗಳಾಗಿಸಬೇಕಿದೆ. ಈ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಿಲ್ಲೆಯಲ್ಲಿ ರಚಿಸಲಾಗಿದೆ. ಅ.4ರಂದು ಕಾಲೇಜುಗಳು ತೆರೆಯುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡಿಕೆ ಎನ್.ಎಸ್.ಎಸ್. ಯೂನಿಟ್ ಗಳ ಸಹಾಯದೊಂದಿಗೆ ನಡೆಸಲಾಗುವುದು ಎಂದವರು ಹೇಳಿದರು.
ಎರಡು ಡೋಸ್ ವಾಕ್ಸಿನ್ ಪಡೆದವರಲ್ಲೂ ಕೋವಿಡ್ ಪಾಸಿಟಿವ್ ಆದವರ ಶೇಕಡಾವಾರು ಗಣನೆ ಕಾಸರಗೋಡು ಜಿಲ್ಲೆಯಲ್ಲಿ ಅಧಿಕ ಎಂದು ಜಿಲ್ಲಾಧಿಕಾರಿ ತಿಳಿಸಿದರು. 18 ರಿಂದ 44 ವರ್ಷದ ನಡುವಿನ ವಯೋಮಾನದವರಲ್ಲಿ 884 ಮಂದಿಗೆ, 45ರಿಂದ 60 ವರ್ಷದ ನಡುವಿನ ವಯೋಮಾನದ ಮಂದಿಯಲ್ಲಿ 1229 ಮಂದಿಗೆ, 60 ರಿಂದ ಮೇಲ್ಪಟ್ಟ ವಯೋಮಾನದ 758 ಮಂದಿಗೆ ಎರಡು ಡೋಸ್ ಲಸಿಕೆ ಸ್ವೀಕಾರ ಮಾಡಿದ ಮೇಲೂ ಕೋವಿಡ್ ಪಾಸಿಟಿವ್ ಆಗಿದೆ. ಈ ನಿಟಿನಲ್ಲಿ ವಾಕ್ಸಿನೇಷನ್ ಪಡೆದರೂ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಸಹಿತ ಕೋವಿಡ್ ಪ್ರತಿರೋಧ ಕಟ್ಟುನಿಟ್ಟುಗಳನ್ನು
ಕಡ್ಡಾಯವಾಗಿ ಪಾಲಿಸುವಂತೆ, ಕೋವಿಡ್ ವಾಕ್ಸಿನೇಷನ್ ಯಜ್ಞದಲ್ಲಿ ಭಾಗಿಗಳಾಗುವಂತೆ ಜಿಲ್ಲಾಧಿಕಾರಿ ಸಾರ್ವಜನಿಕರಲ್ಲಿ ವಿನಂತಿಸಿದರು.
ಜಿಲ್ಲಾ ವಾರ್ತಾಧಿಕಾರಿ ಮಧುಸೂನ್ ಎಂ., ಜಿಲ್ಲಾ ಎಜುಕೇµನ್ ಆಂಂಡ್ ಮೀಡಿಯಾ ಅಧಿಕಾರಿ(ಆರೋಗ್ಯ) ಅಬ್ದುಲ್ ಲತೀಫ್ ಮಠತ್ತಿಲ್ ಉಪಸ್ಥಿತರಿದ್ದರು.





