ತಿರುವನಂತಪುರಂ: ರಾಜ್ಯದಲ್ಲಿ ಲಸಿಕೆಯ ಇತಿಹಾಸದಲ್ಲಿ ಎರಡು ಸಾಧನೆಗಳನ್ನು ಮಾಡಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಂಗಳವಾರ ಹೇಳಿದ್ದಾರೆ. ಒಂದು ಮತ್ತು ಎರಡು ಡೋಸ್ ಸೇರಿದಂತೆ ಒಟ್ಟು ಮೂರು ಕೋಟಿ (3,03,22,694) ಡೋಸ್ ಲಸಿಕೆಯನ್ನು ನೀಡಲಾಗಿದೆ. ಈ ಪೈಕಿ 2,19,86,464 ಮೊದಲ ಡೋಸ್ ಮತ್ತು 83,36,230 ಎರಡನೇ ಡೋಸ್ ನೀಡಲಾಗಿದೆ. ಪ್ರತಿದಿನ ಲಸಿಕೆ ಹಾಕಿದವರ ಸಂಖ್ಯೆಯೂ ದಾಖಲಾಗಿದೆ - ಮಂಗಳವಾರವಷ್ಟೇ 7,37,940 ಜನರಿಗೆ ಲಸಿಕೆ ಹಾಕಲಾಗಿದೆ.
ಈ ಮೊದಲು 5 ಲಕ್ಷಕ್ಕೂ ಹೆಚ್ಚು ಜನರಿಗೆ ಮೂರು ದಿನಗಳಲ್ಲಿ ಲಸಿಕೆ ಹಾಕಲಾಗಿತ್ತು. ಜುಲೈ 30 ರಂದು 5,15,244, ಆಗಸ್ಟ್ 13 ರಂದು 5,60,515 ಮತ್ತು ಆಗಸ್ಟ್ 14 ರಂದು 5,28,321.
ಮೊದಲ ಡೋಸ್ ನ್ನು 18 ವರ್ಷಕ್ಕಿಂತ ಮೇಲ್ಪಟ್ಟ 76.61 ಶೇ. ಜನರಿಗೆ ಮತ್ತು ಎರಡನೇ ಡೋಸ್ ನ್ನು 29.05 ಶೇ.ಜನರಿಗೆ ವಿತರಿಸಲಾಗಿತ್ತು. ಅಂದಾಜು 2021 ಜನಸಂಖ್ಯೆಯ ಪ್ರಕಾರ, 62.11 ಪ್ರತಿಶತದವರಿಗೆ ಮೊದಲ ಡೋಸ್ ಲಸಿಕೆ ಮತ್ತು 23.55 ಪ್ರತಿಶತದವರಿಗೆ ಎರಡನೇ ಡೋಸ್ ನೀಡಲಾಗಿದೆ.
ಲಸಿಕೆ ಹಾಕಿಸಿಕೊಂಡವರಲ್ಲಿ ಪುರುಷರಿಗಿಂತ ಮಹಿಳೆಯರ ಸಂಖ್ಯೆ ಅಧಿಕವಿದೆ. 1,57,00,557 ಮಂದಿ ಮಹಿಳೆಯರಿಗೆ ಮತ್ತು 1,46,15,262 ಪುರುಷರಿಗೆ ಲಸಿಕೆ ವಿತರಿಸಲಾಗಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ಮುನ್ನೆಲೆ ಹೋರಾಟಗಾರರಿಗೆ 100 ಪ್ರತಿಶತ ಮೊದಲ ಡೋಸ್ ಮತ್ತು 86 ಪ್ರತಿಶತ ಎರಡನೇ ಡೋಸ್ ನೀಡಲಾಗಿದೆ. ಈ ತಿಂಗಳು 18 ವರ್ಷ ಮೇಲ್ಪಟ್ಟ ಎಲ್ಲ ಜನರಿಗೆ ಲಸಿಕೆಯ ಮೊದಲ ಡೋಸ್ ನೀಡುವ ಗುರಿಯನ್ನು ರಾಜ್ಯ ಹೊಂದಿದೆ. ಅದಕ್ಕಾಗಿ, ಹೆಚ್ಚಿನ ಲಸಿಕೆಗಳು ಲಭಿಸಲಿದೆ.
ವ್ಯಾಕ್ಸಿನೇಷನ್ ಕೊರತೆಯು ಇತ್ತೀಚೆಗೆ ವ್ಯಾಕ್ಸಿನೇಷನ್ ಗಳ ಹಿನ್ನಡೆಗೆ ಕಾರಣವಾಗಿತ್ತು. ಲಭ್ಯವಿರುವ ಲಸಿಕೆಯನ್ನು ಸಾಧ್ಯವಾದಷ್ಟು ಬೇಗ ಜನರಿಗೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ. ಸೋಮವಾರ 10 ಲಕ್ಷ ಡೋಸ್ ಲಸಿಕೆ ಕೇರಳಕ್ಕೆ ಆಗಮಿಸಿದ್ದು ಲಸಿಕೆ ವಿತರಣೆ ಬಲಪಡಿಸಲಾಯಿತು.





