HEALTH TIPS

ಮೊದಲ ಡೋಸ್‌ನ 4 ವಾರದಲ್ಲೇ ಎರಡನೇ ಡೋಸ್‌ಗೆ ಅನುಮತಿ ನೀಡಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್

               ಕೊಚ್ಚಿ, ಸೆಪ್ಟೆಂಬರ್‌ 10: ಕೊರೊನಾ ವೈರಸ್‌ ವಿರುದ್ದ ಲಸಿಕೆಯನ್ನು ಪಡೆದ ನಾಲ್ಕು ವಾರಗಳ ಬಳಿಕ ಎರಡನೇ ಡೋಸ್‌ ಕೋವಿಶೀಲ್ಡ್‌ ಲಸಿಕೆಗಾಗಿ ಕೋವಿನ್‌ ಆಪ್‌ನಲ್ಲಿ ಬುಕ್‌ ಮಾಡಲು ಅವಕಾಶ ನೀಡಿ ಎಂದು ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.


           "ಯಾರು ಬೇಗನೆ ಎರಡನೇ ಡೋಸ್‌ ಕೋವಿಡ್‌ ಲಸಿಕೆಯನ್ನು ಪಡೆಯಲು ಬಯಸು‌ತ್ತಾರೋ ಅವರಿಗೆ 84 ದಿನಗಳ ಬದಲಾಗಿ ನಾಲ್ಕು ವಾರದಲ್ಲೇ ಕೋವಿಡ್‌ ಲಸಿಕೆಗಾಗಿ ಕೋವಿನ್‌ ಆಪ್‌ನಲ್ಲಿ ಬುಕ್‌ ಮಾಡಲು ಅವಕಾಶ ನೀಡಬೇಕು," ಎಂದು ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಹೇಳಿದೆ.

            84 ದಿನಗಳಿಗೂ ಮುಂಚೆಯೇ ನಮ್ಮ ಉದ್ಯೋಗಿಗಳಿಗೆ ಕೊರೊನಾ ವೈರಸ್‌ ಸೋಂಕಿನ ವಿರುದ್ದದ ಲಸಿಕೆಯ ಎರಡನೇ ಡೋಸ್‌ ಅನ್ನು ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ಕಿಟೆಕ್ಸ್‌ ಗಾರ್ಮೆಟ್‌ ಲಿಮಿಟೆಡ್‌ ಕೇರಳ ಹೈಕೋರ್ಟ್‌ಗೆ ವಕೀಲ ಬ್ಲೇಝ್‌ ಕೆ ಜೋಸ್‌ ಮೂಲಕ ಮನವಿಯನ್ನು ಸಲ್ಲಿಸಿದೆ. ಕೇಂದ್ರ ಸರ್ಕಾರ ಮಾತ್ರ ಈ ಅರ್ಜಿಗೆ ವಿರೋಧವನ್ನು ವ್ಯಕ್ತ ಪಡಿಸಿದೆ. ಆದರೆ ಕೇರಳ ಹೈಕೋರ್ಟ್ ಮೊದಲ ಡೋಸ್‌ ಕೋವಿಡ್‌ ಲಸಿಕೆ ಪಡೆದ ನಾಲ್ಕು ವಾರದಲ್ಲೇ ಎರಡನೇ ಡೋಸ್‌ ಕೋವಿಶೀಲ್ಡ್‌ ಲಸಿಕೆಯನ್ನು ಪಡೆಯಲು ಅವಕಾಶ ಮಾಡಿಕೊಡಬೇಕು ಎಂದು ನಿರ್ದೇಶನ ನೀಡಿದೆ.


                     ಶಿಕ್ಷಣ, ಉದ್ಯೋಗದ ರಕ್ಷಣೆಗಾಗಿ ಯಾಕೆ ಶೀಘ್ರ ಲಸಿಕೆ ನೀಡಲಾಗದು?

            ಈ ಬಗ್ಗೆ ವಿಚಾರಣೆ ನಡೆಸಿ ತೀರ್ಪು ನೀಡುವ ಸಂದರ್ಭದಲ್ಲಿ ಮಾತನಾಡಿದ ನ್ಯಾಯಮೂರ್ತಿ ಪಿ ಬಿ ಸುರೇಶ್ ಕುಮಾರ್‌, "ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರವು ಯಾರು ವಿದೇಶಕ್ಕೆ ಹೋಗಲು ಬಯಸುತ್ತಾರೆ ಅವರು ಶೀಘ್ರವೇ ಎರಡನೇ ಡೋಸ್‌ ಲಸಿಕೆಯನ್ನು ಪಡೆಯುವುದು ಅಥವಾ ಕೊರೊನಾ ವೈರಸ್‌ನಿಂದ ಉತ್ತಮ ರಕ್ಷಣೆ ಪಡೆಯುವುದು ಇವೆರಡರ ನಡುವೆ ಒಂದನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ. ಹೀಗಿರುವಾಗ ಶಿಕ್ಷಣ ಹಾಗೂ ಉದ್ಯೋಗದ ರಕ್ಷಣೆಯ ವಿಚಾರದಲ್ಲಿ ಯಾರು ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಅನ್ನು ಶೀಘ್ರವೇ ಪಡೆಯಲು ಬಯಸು‌ತ್ತಾರೋ ಅವರು ಈ ಲಸಿಕೆಯನ್ನು ಪಡೆಯಲು ಅವಕಾಶ ಯಾಕೆ ನೀಡಬಾರದು," ಎಂದು ಪ್ರಶ್ನಿಸಿದ್ದಾರೆ.

                            ನಾಲ್ಕು ವಾರದ ಬಳಿಕ ಲಸಿಕೆ ಪಡೆಯಲು ಅವಕಾಶ ನೀಡಿ

              ಸೆಪ್ಟೆಂಬರ್‌ ಮೂರರ ದಿನಾಂಕದಲ್ಲಿ ಬಿಡುಗಡೆ ಮಾಡಿರುವ ತನ್ನ ಆದೇಶದಲ್ಲಿ ಕೇರಳ ಹೈಕೋರ್ಟ್, ಯಾರು ಖಾಸಗಿ ಆಸ್ಪತ್ರೆಯಲ್ಲಿ ಹಣವನ್ನು ನೀಡಿ ಲಸಿಕೆಯನ್ನು ಪಡೆಯುತ್ತಾರೋ ಅವರು ಬೇಗನೇ ಎರಡನೇ ಡೋಸ್‌ ಲಸಿಕೆಯನ್ನು ಪಡೆಯಲು ಬಯಸಿದರೆ ಪಡೆಯಬಹುದು ಎಂದು ಕೇಂದ್ರ ಸರ್ಕಾರ ಆರೋಗ್ಯ ಸಚಿವಾಲಯದ ನೀತಿಯೇ ಹೇಳುತ್ತದೆ," ಎಂಬುವುದನ್ನು ಈ ಸಂದರ್ಭದಲ್ಲೇ ಕೇರಳ ಹೈಕೋರ್ಟ್ ಗಮನಿಸಿದೆ. "ಕೋವಿಶೀಲ್ಡ್‌ ಲಸಿಕೆಯನ್ನು ನಾಲ್ಕು ವಾರಗಳ ನಂತರ ಪಡೆಯುವಂತಹ ಅವಕಾಶವನ್ನು ಕಲ್ಪಿಸುವ ಬದಲಾವಣೆಗಳನ್ನು ಕೇಂದ್ರ ಸರ್ಕಾರವು ಕೋವಿನ್‌ ಆಪ್‌ನಲ್ಲಿ ಮಾಡಿಕೊಳ್ಳಬೇಕು. ಎರಡನೇ ಡೋಸ್‌ ಅನ್ನು ನಾಲ್ಕು ವಾರಗಳ ನಂತರ ಪಡೆಯಲು ಬಯಸುವವರಿಗೆ ಈ ಮೂಲಕ ಲಸಿಕೆಯನ್ನು ಶೀಘ್ರವೇ ಪಡೆಯಲು ಅವಕಾಶ ಮಾಡಿಕೊಡಬೇಕು," ಎಂದು ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಆದೇಶ ನೀಡಿದೆ.

                           ಅರ್ಜಿಯಲ್ಲಿ ಏನು ಹೇಳಿದೆ ಕಿಟೆಕ್ಸ್‌?

                 ಇನ್ನು ತಮ್ಮ ಅರ್ಜಿಯಲ್ಲಿ ಕಿಟೆಕ್ಸ್‌, "ನಾವು ಈಗಾಗಲೇ ಸುಮಾರು ಐದು ಸಾವಿರಕ್ಕೂ ಅಧಿಕ ನಮ್ಮ ಉದ್ಯೋಗಿಗಳಿಗೆ ಮೊದಲ ಡೋಸ್‌ ಕೋವಿಡ್‌ ಲಸಿಕೆಯನ್ನು ಹಾಕಿಸಿದ್ದೇವೆ. ಹಾಗೆಯೇ ಸುಮಾರು 93 ಲಕ್ಷ ವೆಚ್ಚದಲ್ಲಿ ಎರಡನೇ ಡೋಸ್‌ ಲಸಿಕೆಗಾಗಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಆದರೆ ಈ ಮೊದಲ ಡೋಸ್‌ ಪಡೆದ ಬಳಿಕ ಎರಡನೇ ಡೋಸ್‌ ಪಡೆಯುವ ಮಧ್ಯಂತರ ಅವಧಿಯ ಕಾರಣದಿಂದಾಗಿ ನಮಗೆ ಈಗ ನಮ್ಮ ಉದ್ಯೋಗಿಗಳಿಗೆ ಲಸಿಕೆಯನ್ನು ಹಾಕಿಸಲು ಸಾಧ್ಯವಾಗುತ್ತಿಲ್ಲ," ಎಂದು ಹೇಳಿದೆ.

                               ಕೇಂದ್ರ ಸರ್ಕಾರದಿಂದ ವಿರೋಧ ವ್ಯಕ್ತ

                ಆದರೆ ಕೇಂದ್ರ ಸರ್ಕಾರವು ಈ ಮನವಿಗೆ ವಿರೋಧ ವ್ಯಕ್ತಪಡಿಸಿದೆ. ಕೊರೊನಾ ವೈರಸ್‌ ಲಸಿಕೆಯ ಪ್ರಭಾವವನ್ನು ಹೆಚ್ಚಿಸುವ ಸಲುವಾಗಿ ನಾವು ಮೊದಲ ಡೋಸ್‌ ಕೋವಿಶೀಲ್ಡ್‌ ಲಸಿಕೆಯನ್ನು ಪಡೆದ 84 ದಿನಗಳ ಬಳಿಕ ಎರಡನೇ ಡೋಸ್‌ ಕೋವಿಶೀಲ್ಡ್‌ ಲಸಿಕೆಯನ್ನು ಪಡೆಯಬೇಕು ಎಂದು ನಿಯಮ ಮಾಡಿದ್ದೇವೆ," ಎಂದು ವಾದಿಸಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries