ಕಾಸರಗೋಡು: ಕಾಸರಗೋಡು ಜಿಲ್ಲೆಯ 6 ವಿದ್ಯಾಲಯಗಳಿಗೆ ನೂತನ ಕಟ್ಟಡಗಳ, ಪ್ರಯೋಗಾಲಯಗಳ ಮೂಲಕ ಅಭಿವೃದ್ಧಿಯ ಹೊಳಪು ಲಭಿಸಿದೆ.
ರಾಜ್ಯ ಸರಕಾರದ 100 ದಿನಗಳ ಕ್ರಿಯಾ ಕಾರ್ಯಕ್ರಮ ಅಂಗವಾಗಿ ಕಿಫ್ ಬಿ, ನಬಾರ್ಡ್, ಪ್ಲಾನ್ ಫಂಡ್ ಇತ್ಯಾದಿಗಳ ಮೂಲಕ ನಿರ್ಮಿಸಲಾದ ಕಟ್ಟಡಗಳ ಉದ್ಘಾಟನೆ ಸೆ.14ರಂದು ನಡೆಯಲಿದೆ. ಈ ವೇಳೆ ಜಿಲ್ಲೆಯಲ್ಲಿ 5 ಶಾಲೆಗಳ ಪ್ರಯೋಗಾಯಗಳು, ಒಂದು ಶಾಲೆಯ ನೂತನ ಕಟ್ಟಡಗಳ ಚಾಲನೆ ನಡೆಯಲಿವೆ.
ಆನ್ ಲೈನ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ-ನೌಕರಿ ಸಚಿವ ವಿ.ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸುವರು. ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲನ್ ಮುಖ್ಯ ಅತಿಥಿಯಾಗಿರುವರು. ಸಚಿವರು, ಪ್ರತಿಪಕ್ಷ ನೇತಾರ, ಚೀಫ್ ವಿಪ್ ಮೊದಲಾದವರು ಉಪಸ್ಥಿತರಿರುವರು.
ಪೇರಾಲ್ ಜಿ.ಜೆ.ಬಿ.ಎಸ್.ನ ನೂತನ ಕಟ್ಟಡ, ಕುಂಡಂಕುಳಿ ಜಿ.ಎಚ್.ಎಸ್.ಎಸ್., ಹೊಸದುರ್ಗ ಜಿ.ಎಚ್.ಎಸ್.ಎಸ್., ಕಯ್ಯೂರು ಜಿ.ವಿ.ಎಚ್.ಎಸ್.ಎಸ್., ಬಳಾಂತೋಡು ಜಿ.ಎಚ್.ಎಸ್.ಎಸ್., ಉದುಮಾ ಜಿ.ಎಚ್.ಎಸ್.ಎಸ್.ಗಳ ಪ್ರಯೋಗಾಲಯಗಳ ಉದ್ಘಾಟನೆ ಈ ವೇಳೆ ಜರುಗಲಿದೆ.




