ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೆ.11ರಂದು ಸುಧಾರಿತ ವಾಕ್ಸಿನೇಷನ್ ಡ್ರೈವ್ ನಡೆಯಲಿದ್ದು, 87 ಲಸಿಕೆ ಕೇಂದ್ರಗಳು ಸಜ್ಜುಗೊಂಡಿವೆ.
ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸುವ ಸುಧಾರಿತ ವಾಕ್ಸಿನೇಷನ್ ಡ್ರೈವ್ ಅಂಗವಾಗಿ ಸೆ.11ರಂದು ಕೋವೀಶೀಲ್ಡ್ ಲಸಿಕೆ ನೀಡಿಕೆ ಸಂಬಂಧ 44 ಆರೋಗ್ಯ ಕೇಂದ್ರಗಳಲ್ಲಿ ಮತ್ತು ಕೋವಾಕ್ಸಿನ್ ನೀಡಿಕೆ ಸಂಬಂಧ 43 ಆರೋಗ್ಯ ಕೇಂದ್ರಗಳಲ್ಲಿ ಎಂಬ ರೀತಿ ಒಟ್ಟು 87 ಲಸಿಕೆ ಕೇಂದ್ರಗಳ ಸಜ್ಜೀಕರಣ ನಡೆಸಲಾಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ತಿಳಿಸಿದರು.
ಆನ್ ಲೈನ್ ನೋಂದಣಿ ಮತ್ತು ಸ್ಪಾಟ್ ನೋಂದಣಿ ಮೂಲಕ ಲಸಿಕೆ ನೀಡಲಾಗುವುದು. ಆನ್ ಲೈನ್ ಮೂಲಕ ನೋಂದಣಿ ನಡೆಸುವ ನಿಟ್ಟಿನಲ್ಲಿ ಅಲೋಟ್ ಮೆಂಟ್ ಈಗಾಗಲೇ ಆರಮಭಗೊಂಡಿದೆ. ವಾಕ್ಸಿನೇಷನ್ ಅಗತ್ಯವಿರುವ ಮಂದಿ ಛಿoತಿiಟಿ.gov.iಟಿವೆಬ್ ಸೈಟ್ ಮೂಲಕದ ಅಲೋಟ್ ಮೆಂಟ್ ಬುಕ್ಕಿಂಗ್ ನಡೆಸಬಹುದು. ಸ್ಪಾಟ್ ನೋಂದಣಿ ಮೂಲಕ ವಾಕ್ಸಿನ್ ಲಭ್ಯತೆಗಾಗಿ ಆರೋಗ್ಯ ಕಾರ್ಯಕರ್ತರನ್ನು ಯಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು. ಮೊದಲ ಡೋಸ್ ಲಸಿಕೆ ಪಡೆಯಬೇಕಿದ್ದವರು , ದ್ವಿತೀಯ ಡೋಸ್ ಪಡೆಯಬೇಕಿರುವವರು ಲಸಿಕೆ ಸ್ವೀಕರಿಸುವ ಮೂಲಕ ವಾಕ್ಸಿನೇಷನ್ ಡ್ರೈವ್ ನಲ್ಲಿ ಭಾಗಿಗಳಾಗುವಂತೆ ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ವಿನಂತಿಸಿದರು.
ಹೆಚ್ಚುವರಿ ಮಾಹಿತಿಗಾಗಿ 9061076590 ಎಂಬ ನಂಬ್ರಕ್ಕೆ ಕರೆಮಾಡಬಹುದು.





