HEALTH TIPS

ಕೆ.ಎಸ್.ಆರ್.ಟಿ.ಸಿ ಸಾರ್ವಜನಿಕರಿಗಾಗಿ ಪೆಟ್ರೋಲ್ ಪಂಪ್‍ಗಳು ಇಂದಿನಿಂದ ಮುಕ್ತ: ಪ್ರಾಯೋಗಿಕವಾಗಿ 8 ಘಟಕಗಳಲ್ಲಿ ಆರಂಭ

                                                        

                        ತಿರುವನಂತಪುರಂ: ಸಾರ್ವಜನಿಕ ವಲಯದ ತೈಲ ಕಂಪನಿಗಳ ಜಂಟಿ ಉದ್ಯಮವಾದ ಕೆ.ಎಸ್.ಆರ್.ಟಿ.ಸಿ. ಯಾತ್ರಾ ಇಂಧನಗಳ ರಾಜ್ಯ ಮಟ್ಟದ ಉದ್ಘಾಟನೆಯು ಇಂದು  ತಿರುವನಂತಪುರಂನ ಈಸ್ಟ್ ಪೋರ್ಟ್ ನಲ್ಲಿ ನಡೆಯಲಿದೆ.

                  ಕೆ.ಎಸ್.ಆರ್.ಟಿ.ಸಿ. ಪ್ರಯಾಣ ಇಂಧನಗಳು ಸಾರ್ವಜನಿಕ ವಲಯದ ತೈಲ ಕಂಪನಿಗಳೊಂದಿಗೆ ಒಂದು ವಿನೂತನ ಉದ್ಯಮವಾಗಿದೆ.

             ಮೊದಲ ಹಂತದಲ್ಲಿ, ಯೋಜನೆಯ ಭಾಗವಾಗಿ, ಕೆ ಎಸ್ ಆರ್ ಟಿ ಸಿ ಯ ಎಂಟು ಪಂಪ್‍ಗಳನ್ನು ಸಾರ್ವಜನಿಕರಿಗೆ ಇಂಧನ ತುಂಬಿಸಲು ಒದಗಿಸಲಾಗುವುದು. ಈಸ್ಟ್ ಪೋರ್ಟ್, ಕಿಳಿಮಾನೂರು, ಚಡಯಮಂಗಲಂ, ಚಾಲಕುಡಿ, ಮೂವಾಟ್ಟುಪುಳ, ಮುನ್ನಾರ್, ಚೇರ್ತಲ ಮತ್ತು ಕೋಝಿಕ್ಕೋಡ್‍ನಲ್ಲಿರುವ ಪೆಟ್ರೋಲ್ ಪಂಪ್‍ಗಳನ್ನು ಸಾರ್ವಜನಿಕರಿಗೆ ತೆರೆಯಲಾಗುವುದು.

                  ಆರಂಭದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ನ್ನು ಈ ಘಟಕಗಳಲ್ಲಿ  ವಿತರಿಸಲಾಗುವುದು. ಆದಾಗ್ಯೂ, ಕ್ರಮೇಣವಾಗಿ, ಹಸಿರು ಇಂಧನಗಳಾದ ಎಲ್ ಎನ್ ಜಿ, ಸಿ ಎನ್ ಜಿ, ಎಲೆಕ್ಟ್ರಿಕ್ ವಾಹನ ಚಾಜಿರ್ಂಗ್ ಸ್ಟೇಷನ್‍ಗಳು ಮತ್ತು 5 ಕೆಜಿ ಎಲ್ ಪಿ ಜಿ ಸಿಲಿಂಡರ್ ಜಾಡಿಗಳ ಅನಿಲ ವಿತರಣೆ ಲಭ್ಯವಿರುತ್ತವೆ. ಇಂಧನ ತುಂಬಲು ಬಂದವರಿಗೆ ಲಾಟರಿ ಮೂಲಕ ಹೆಚ್ಚಿನ ಲಾಭ ಮತ್ತು ಬಹುಮಾನಗಳನ್ನು ನೀಡಲು ನಿರ್ಧರಿಸಲಾಗಿದೆ.

                 ಉದ್ಘಾಟನೆಯ ಜೊತೆಯಲ್ಲಿ ಬೈಕ್ ಸವಾರರಿಗೆ ತೈಲ ತುಂಬಿಸುವುದರೊಂದಿಗೆ ಎಂಜಿನ್ ಆಯಿಲ್ ಬದಲಾವಣೆ ಉಚಿತವಾಗಿರುತ್ತದೆ. ಇದರ ಜೊತೆಗೆ, 200 ರೂ.ಗಿಂತ ಹೆಚ್ಚಿನ ಇಂಧನ ತುಂಬುವ ದ್ವಿಚಕ್ರ ವಾಹನ ಮಾಲೀಕರು ಮತ್ತು 500 ರೂ.ಗಿಂತ ಹೆಚ್ಚಿನ ಇಂಧನ ತುಂಬುವ ನಾಲ್ಕು ಚಕ್ರದ ವಾಹನ ಮಾಲೀಕರು ವಿಶೇಷ ಅಭಿಯಾನದಲ್ಲಿ ಭಾಗವಹಿಸಬಹುದು. ಅಭಿಯಾನದಲ್ಲಿ ಭಾಗವಹಿಸುವವರಿಂದ ಡ್ರಾ ವಿಜೇತರಿಗೆ ಬಹುಮಾನವಾಗಿ ಕಾರು ಅಥವಾ ಬೈಕನ್ನು ಗೆಲ್ಲುವ ಅವಕಾಶವೂ ಇರುತ್ತದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries