HEALTH TIPS

ಲಸಿಕೆ ಅಭಿಯಾನ ಯಶಸ್ವಿ: ಇನ್ಫೋಪಾರ್ಕ್ ನಲ್ಲಿರುವ ಐಟಿ ಕಂಪನಿಗಳು ಮನೆಯಿಂದ ಮತ್ತೆ ಕಚೇರಿಗೆ

                                                            

                         ಕೊಚ್ಚಿ: ಐಟಿ ಕಂಪನಿಗಳು ಎಂದಿನಂತೆ ಇನ್ಫೋಪಾರ್ಕ್ ನಲ್ಲಿ ಕಾರ್ಯಾಚರಣೆಯನ್ನು ಪುನರಾರಂಭಿಸಲು ಸಜ್ಜಾಗಿವೆ. ಎಲ್ಲಾ ಐಟಿ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಕೊರೋನಾ ಲಸಿಕೆಗಳನ್ನು ಇನ್ಫೋ ಪಾರ್ಕ್‍ನಲ್ಲಿ ಈ ತಿಂಗಳು ಪೂರ್ಣಗೊಳಿಸಲಿರುವುದರಿಂದ ಮತ್ತೆ ಟೆಕ್ನೋ ಪಾರ್ಕ್ ಸಕ್ರಿಯಗೊಳ್ಳಲಿದೆ.

                    ಈಗಾಗಲೇ ಲಸಿಕೆಯನ್ನು ಪೂರ್ಣಗೊಳಿಸಿರುವ ಕೆಲವು ಕಂಪನಿಗಳು ತಮ್ಮ ಕಚೇರಿ ಚಟುವಟಿಕೆಗಳನ್ನು ಪುನರಾರಂಭಿಸಿದೆ. ಕೇರಳ ಐಟಿ ಪಾಕ್ರ್ಸ್ ಸಿಇಒ ಜಾನ್ ಥಾಮಸ್ ಅವರು  ಸಂಪೂರ್ಣ ವ್ಯಾಕ್ಸಿನೇಷನ್ ಜೊತೆಗೆ, ಶಾಲೆಗಳನ್ನು ಪುನಃ ತೆರೆಯುವುದರಿಂದ ಹೆಚ್ಚಿನ ಉದ್ಯೋಗಿಗಳು ತಮ್ಮ ಕಚೇರಿಗಳಿಗೆ ಮರಳಲು ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.

            ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಕಂಪನಿಗಳು ಒಂದೂವರೆ ವರ್ಷದಿಂದ ಮನೆಯಿಂದ ಕೆಲಸ ಮಾಡುವ ವಿಧಾನವನ್ನು ಅನುಸರಿಸುತ್ತಿವೆ. ಇದು ಜನರಲ್ಲಿ ಸಾಕಷ್ಟು ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಮನೆಗಳಿಂದಲೇ ಕಚೇರಿ ಕೆಲಸಗಳ ನಿರ್ವಹಣೆಯ ಒತ್ತಡ, ಇತರ ಸಮಸ್ಯೆಗಳ ಬಗ್ಗೆ ಹಲವು ಉದ್ಯೋಗಿಗಳ ಅ|ಳಲಿನ ಕಾರಣ ಇದೀಗ ಪರಿಹಾರ ದೊರಕಿದಂತಾಗಿದೆ. ಲಸಿಕೆ ಅಭಿಯಾನದ ಯಶಸ್ಸು ಅವರ ಭರವಸೆಯನ್ನು ಹೆಚ್ಚಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries