ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಸಜ್ಜಿತವಾದ ಆಸ್ಪತ್ರೆ ನಿರ್ಮಾಣಕ್ಕೆ ಕೇರಳ ಸರ್ಕಾರವನ್ನು ಬಿಜೆಪಿ ಆಗ್ರಹಿಸಿದೆ. ಇಲ್ಲಿನ ಜನತೆ ತನ್ನ ವಿದ್ಯಾಭ್ಯಾಸಕ್ಕೆ, ಆರೋಗ್ಯ ವಿಭಾಗಕ್ಕೆ, ಉದ್ಯೋಗಕ್ಕೆ ಕರ್ಣಾಟಕವನ್ನು ನಿರಂತರ ಆಶ್ರಯೀಸುವಂತಾಗಿದೆ. ಮಂಜೇಶ್ವರದ ಶಾಸಕರು, ಸಂಸದರು, ಇಲ್ಲಿನ ಸಮಸ್ಯೆಗಳ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಬಿಜೆಪಿ ಆರೋಪಿಸಿಸಿದೆ.
ಸೂರಂಬೈಲು ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಈ ಆರೋಪ ವ್ಯಕ್ತವಾಗಿದೆ.
ಮಂಜೇಶ್ವರ ಶಾಸಕರು ಇನ್ನು ಹನಿಮೂನ್ ಮೂಡ್ ನಿಂದ ಹೊರಬಂದಿಲ್ಲ. ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸಿ ಬೇಜವಾಬ್ದಾರಿ ಹೇಳಿಕೆಗಳು ಭೂಷಣವಲ್ಲ ಎಂದು ಬಿಜೆಪಿ ಮಂಡಲ ಸಮಿತಿ ಆರೋಪಿಸಿದೆ.
ಮಂಡಲ ಅಧ್ಯಕ್ಷ ಮಣಿಕಂಠ ರೈ,ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರ.ಕಾರ್ಯದರ್ಶಿ ಸುಧಾಮ ಗೋಸಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖಂಡರುಗಳಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಎ ಕೆ ಕಯ್ಯಾರ್, ಸರೋಜ ಬಲ್ಲಾಳ್, ರೂಪವಾಣಿ ಆರ್.ಭಟ್, ವಿಜಯ್ ರೈ, ನಾರಾಯಣ ನಾಯ್ಕ್, ಸದಾಶಿವ ಚೇರಾಲ್, ಚಂದ್ರಹಾಸ ಕಡಂಬಾರ್ ಹಾಗೂ ವಿವಿಧ ಪಂಚಾಯತಿಗಳ ಅಧ್ಯಕ್ಷರು ಜನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಅದರ್ಶ ಬಿ.ಎಂ. ಸ್ವಾಗತಿಸಿ, ರಮೇಶ್ ಭಟ್ ವಂದಿಸಿದರು. ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಸಮಿತಿಗೆ ನೇಮಕವಾಗಿರುವ ಅಶ್ವಿನಿ ಪಜ್ವ ರನ್ನು ಅಭಿನಂದಿಸಲಾಯಿತು.





