ಕುಂಬಳೆ: ಕೇರಳ ಪ್ರದೇಶ ಸ್ಕೂಲ್ ಟೀಚರ್ ಅಸೋಸಿಯೇಷನ್(ಕೆಪಿಎಸ್ ಟಿ ಎ) ಕುಂಬಳೆ ಉಪಜಿಲ್ಲಾ ಸಮಿತಿಯ ವತಿಯಿಂದ ಗುರು ಸ್ಪಶರ್ಂ=2 ಕಾರುಣ್ಯ ಚಟುವಟಿಕೆಯ ಭಾಗವಾಗಿ ಕುಂಬಳೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ಕುಂಬಳೆ ಉಪಜಿಲ್ಲಾ ಸಮಿತಿ ಯ ವತಿಯಿಂದ ಔಷಧಿ ಕಿಟ್ ಹಸ್ತಾಂತರಿಸಲಾಯಿತು.
ಸಭಾಕಾರ್ಯಕ್ರಮದಲ್ಲಿ ಕೆಪಿಎಸ್ ಟಿ ಎ ಕುಂಬಳೆ ಉಪ ಜಿಲ್ಲಾ ಮಾಜಿ ಅಧ್ಯಕ್ಷ ರವಿಶಂಕರ್ ನೆಗಳಗುಳಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವಾಕರ ರೈ ಅವರಿಗೆ ಕೆಪಿಎಸ್ ಟಿ ಎ ಕುಂಬಳೆ ಉಪಜಿಲ್ಲಾ ಕೋಶಾಧಿಕಾರಿ ನಿರಂಜನ ರೈ ಪೆರಡಾಲ ಔಷಧಿ ಕಿಟ್ ಹಸ್ತಾಂತರಿಸಿದರು. ಕುಂಬಳೆ ಆರೋಗ್ಯ ಕೇಂದ್ರದ ಆರೋಗ್ಯ ಅಧಿಕಾರಿ ಅಶ್ರಫ್, ಸುಬ್ಬ ಗಟ್ಟಿ, ಕೆಪಿ ಎಸ್ ಟಿ ಎ ರಾಜ್ಯ ಕೌನ್ಸಿಲರ್ ಯೂಸುಫ್ ಮಾಸ್ತರ್, ಕುಂಬಳೆ ಉಪ ಜಿಲ್ಲಾಧ್ಯಕ್ಷೆ ಜಲಜಾಕ್ಷಿ ಟೀಚರ್, ಕೆಪಿ ಎಸ್ ಟಿ ಎ ಕಾಸರಗೋಡು ವಿದ್ಯಾಭ್ಯಾಸ ಜಿಲ್ಲಾ ಕಾರ್ಯದರ್ಶಿ ಗೋಪಾಲ ಮಾಸ್ತರ್ ಶುಭ ಹಾರೈಸಿದರು. ಆರೋಗ್ಯ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಧಾಕೃಷ್ಣನ್ ಮಾಸ್ತರ್ ಸ್ವಾಗತಿಸಿ ವಂದಿಸಿದರು.





