ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಹಳೆ ವಿದ್ಯಾರ್ಥಿ ಸಂಘ ಗ್ರಂಥಾಲಯದ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಭಾಗವಾಗಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಪೈವಳಿಕೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಕಾಂತ ರಾವ್ ಇವರನ್ನು ಅವರ ಸ್ವಗೃಹದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮೀಂಜ ಗ್ರಾಮ ಪಂಚಾಯತಿಯ ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕ ರಾಜಾರಾಮ್ ರಾವ್, ಅಕ್ಷಯ ಕುಮಾರ್ ಎಲಿಯಾಣ (ಡಿ.ಎಸ್.ಟಿ ಇನ್ಸ್ಪ್‍ಯರ್ ಫೆಲೋ ಮಂಗಳೂರು ವಿಶ್ವವಿದ್ಯಾಲಯ) ಮೊದಲಾದವರು ಅಭಿನಂದನಾ ಭಾಷಣಗೈದರು. ಗ್ರಂಥಪಾಲಕಿ ತುಳಸಿಯವರು ಅಭಿನಂದನಾ ಪತ್ರ ವಾಚಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿ ಸರೋಜ ಟೀಚರ್ ಶುಭಾ ಟೀಚರ್, ರಘುವೀರ್ ಉಪಸ್ಥಿತರಿದ್ದರು. ಗ್ರಂಥಾಲಯ ಪದಾಧಿಕಾರಿಗಳಾದ ಬಾಬು ಎಮ್, ಜನಾರ್ಧನ ಎಸ್, ಸುರೇಶ ಎಮ್, ಸ್ವಪ್ನಾ ಭಟ್ ಮೊದಲಾದವರು ಭಾಗವಹಿಸಿದರು. ಗ್ರಂಥಾಲಯ ಕಾರ್ಯದರ್ಶಿ ಸುರೇಶ ಬಂಗೇರ ಸ್ವಾಗತಿಸಿ, ಗ್ರಂಥಾಲಯ ಅಧ್ಯಕ್ಷ ರಾಮಚಂದ್ರ. ಟಿ ವಂದಿಸಿದರು.





