ಪೆರ್ಲ: ಎಣ್ಮಕಜೆ ಪಂಚಾಯತಿ ಮಟ್ಟದ ವತಿಯಿಂದ ಸೆ.8 ವಿಶ್ವ ಸಾಕ್ಷರತಾ ದಿನಾಚರಣೆಯನ್ನು ಕೋವಿಡ್ ನಿಬಂಧನೆಯಂತೆ ಸರಳವಾಗಿ ಆಚರಿಸಲಾಯಿತು.
ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಸಾಕ್ಷರತಾ ಧ್ವಜಾರೋಹಣಗೈದು ಉದ್ಘಾಟಿಸಿದರು. ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಝರೀನಾ ಮುಸ್ತಾಫ, ಮಹೇಶ್ ಭಟ್, ಮಂಜೇಶ್ವರ ಬ್ಲಾಕ್ ಪ್ರೇರಕ್ ಪರಮೇಶ್ವರ ನಾಯ್ಕ, ಎಣ್ಮಕಜೆ ಪಂಚಾಯತಿ ಪ್ರೇರಕ ಅನಂದ ಕೆ, ಜಲಜಾಕ್ಷಿ ಉಪಸ್ಥಿತರಿದ್ದರು.





