HEALTH TIPS

ರಾಷ್ಟ್ರೀಯ ಪ್ರಶಸ್ತಿ ವಿಜೇತ ಅಚ್ಯುತ ಚೇವಾರರಿಗೆ ಅಭಿನಂದನೆ ಹಾಗೂ ಚಿತ್ರ ಪ್ರದರ್ಶನ: ಪತ್ರಕರ್ತರ ಆಶೋತ್ತರಗಳಿಗೆ ಧ್ವನಿಯಾದ ಸಂಘಟನೆ ಸ್ತುತ್ಯರ್ಹ; ಎಡನೀರು ಮಠಾಧೀಶ

     
      ಕುಂಬಳೆ: ಮಾಧ್ಯಮ ವಲಯದ ಸಮಗ್ರ ಆಶೋತ್ತರಗಳ ಸಾಕಾರತೆಗೆ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ಕಾರ್ಯನಿರ್ವಹಿಸುತ್ತಿರುವುದು ಸ್ತುತ್ಯರ್ಹ. ಪತ್ರಕರ್ತ ಅಚ್ಯುತ ಚೇವಾರರಿಗೆ ಒದಗಿಬಂದ ಕೆ.ಟಿ ವೇಣುಗೋಪಾಲಗ ರಾಷ್ಟ್ರೀಯ ಪ್ರಶಸ್ತಿ ಜಿಲ್ಲೆಯ ಕನ್ನಡ ಮಾಧ್ಯಮ ಕ್ಷೇತ್ರದ ಹೆಮ್ಮೆ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ತಿಳಿಸಿದರು.
          ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ನೇತೃತ್ವದಲ್ಲಿ  ಕೆ.ಟಿ.ವೇಣುಗೋಪಾಲ್ ಸ್ಮಾರಕ ರಾಷ್ಟ್ರೀಯ ಮಾಧ್ಯಮ ಪ್ರಶಸ್ತಿ ವಿಜೇತ ಅಚ್ಯುತ ಚೇವಾರ್ ಅವರಿಗೆ ಶನಿವಾರ ಬಂದ್ಯೋಡು ಸಮೀಪದ ವಳಯಂನ ಡಿ.ಎಂ.ಕಬನಾ ರಿಸಾರ್ಟ್ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

                  ಬೇಳ ಶೋಕಮಾತಾ ದೇವಾಲಯದ ಧರ್ಮಗುರು ಸ್ಟ್ಯಾನಿ ಪಿರೇರ,  ಉಪಸ್ಥಿತರಿದ್ದು ಶುಭ ಹಾರೈಸಿದರು. ಮಂಜೇಶ್ವರ ಶಾಸಕ  ಎ.ಕೆ.ಎಂ.ಅಶ್ರಫ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕಾಸರಗೋಡಿನ ಕನ್ನಡ ಅಸ್ಮಿತೆಯ ಉಳಿಯುವಿಕೆಗೆ ಪತ್ರಕರ್ತರ ಕೊಡುಗೆ ಮಹತ್ತರವಾದುದು. ಆದರೆ ನ್ಯಾಯಯುತ ಸವಲತ್ತುಗಳಿಂದ ವಂಚಿತರಾದ ಕಾಸರಗೋಡಿನ ಕನ್ನಡ ಮಾ|ಧ್ಯಮ ಕ್ಷೇತ್ರದ ನೆರವಿಗೆ ಕೇರಳ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗುವುದೆಂದು ಭರವಸೆ ನೀಡಿದರು.      

              ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ದಂತ ವೈದ್ಯ ಡಾ.ಮುರಳೀ ಮೋಹನ್ ಚೂಂತಾರು, ಹಿರಿಯ ಪತ್ರಕರ್ತ ಸುರೇಂದ್ರನ್ ಕೆ., ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಶಂಕರ ಸಾರಡ್ಕ, ಮಂಗಳೂರು ಒಮೇಗಾ ಆಸ್ಪತ್ರೆಯ ಆಡಳಿತಾಧಿಕಾರಿ ಎಸ್.ಎಲ್.ಭಾರದ್ವಾಜ್ , ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅತಿಥಿಗಳಾಗಿ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. 
             ಹಿರಿಯ ಪತ್ರಕರ್ತ ಪ್ರದೀಪ್  ಬೇಕಲ್ ಅವರ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.   ಜಿ.ಪಂ.ಸದಸ್ಯ ಗೋಲ್ಡನ್ ರಹಮಾನ್ ಉದ್ಘಾಟಿಸಿದರು. 

       ಬಾಲಪ್ರತಿಭೆ ಸಮನ್ವಿತಾ ಗಣೇಸದ್ ಅಣಂಗೂರು ಅವರಿಂದ ಭಾವಗೀತಾ ಗಾಯನ ಹಾಗೂ ಅಭಿಜ್ಞಾ ಹರೀಶ್ ಅವರಿಂದ ಯೋಗ ಪ್ರದರ್ಶನ ನಡೆಯಿತು. ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಯಾದವ್ ಸ್ವಾಗತಿಸಿ, ಖಜಾಂಜಿ ಪುರುಷೋತ್ತಮ ಪೆರ್ಲ ವಂದಿಸಿದರು.ಪುರುಷೋತ್ತಮ ಭಟ್ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿ ನಾಯ್ಕಾಪು ನಿರೂಪಿಸಿದರು. ಬಳಿಕ ಸುಜಾತಾ ಮುಳ್ಳೇರಿಯ ಅವರಿಂದ ಕೂಚುಪುಡಿ ನೃತ್ಯ, ಅಭಿಜ್ಞಾ ಹರೀಶ್ ಕರಂದಕ್ಕಾಡ್ ಅವರಿಂದ ನೃತ್ಯ-ಯೋಗ ಪ್ರದರ್ಶನ ಸಹಿತ ವಿವಿಧ ಸಾಸ್ಕøತಿಕ ವೈವಿಧ್ಯ ನಡೆಯಿತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries