ಮುಳ್ಳೇರಿಯ: ಇತ್ತೀಚಿಗೆ ನಿಧನರಾದ ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಆಡಳಿತ ಮೊಕ್ತೇಸರ ದಿ.ಎನ್. ಸುಬ್ರಾಯ ಬಳ್ಳುಳ್ಳಾಯ ಅವರಿಗೆ ನುಡಿ ನಮನ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ಜರಗಿತು.
ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷತೆ ವಹಿಸಿ ನುಡಿನಮನ ಸಲ್ಲಿಸಿದರು. ಶಂಕರನಾರಾಯಣ ಹೊಳ್ಳ, ರಾಘವನ್ ಬೆಳ್ಳಿಪ್ಪಾಡಿ, ಗೋವಿಂದ ಬಳ್ಳಮೂಲೆ ಸಾಂದರ್ಭಿಕ ನುಡಿಗಳನ್ನಾಡಿದರು.
ಸದಸ್ಯರಾದ ರಾಘವೇಂದ್ರ ಉಡುಪುಮೂಲೆ, ಅನುಪಮಾ ರಾಘವೇಂದ್ರ, ವಿಜಯಲಕ್ಷ್ಮಿ ಮುರಳಿಕೃಷ್ಣ ಸ್ಕಂದ, ಹರಿಕೃಷ್ಣ ಪೆರಡಂಜಿ, ರಾಜೇಶ್ವರಿ ಈಶ್ವರ ಭಟ್ ಬಳ್ಳಮೂಲೆ ಉಪಸ್ಥಿತರಿದ್ದರು. ವೃಂದ ಬಳ್ಳಮೂಲೆ ಪ್ರಾರ್ಥನೆ ಹಾಡಿದರು. ಡಾ. ಶಿವಕುಮಾರ್ ಅಡ್ಕ ಸ್ವಾಗತಿಸಿ, ಸೀತಾರಾಮ ಬಳ್ಳುಳ್ಳಾಯ ವಂದಿಸಿದರು. ಮುರಳಿಕೃಷ್ಣ ಸ್ಕಂದ ಕಾರ್ಯಕ್ರಮ ಸಂಯೋಜನೆ ಮಾಡಿದರು. ಕೃಷ್ಣ ಭಟ್ ಅಡ್ಕ ಕಾರ್ಯಕ್ರಮ ನಿರ್ವಹಣೆ ಮಾಡಿದರು.

