ಮುಳ್ಳೇರಿಯ: ಯಕ್ಷಗಾನ ಕಲಾವಿದರಾಗಿದ್ದ ದಿವಂಗತ ಈಶ್ವರ ಭಟ್ ಬಳ್ಳಮೂಲೆ ಅವರ ಸ್ಮರಣಾರ್ಥ ಸುಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸಂತೋಷ ಕುಮಾರ್ ಮಾನ್ಯ ಅವರನ್ನು ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ಸನ್ಮಾನಿಸಲಾಯಿತು.
ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರದಲ್ಲಿ ಜರಗಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುಬ್ರಹ್ಮಣ್ಯ ಅಡ್ಕ ಅವರು ಶಾಲು ಹೊದೆಸಿ ಗೌರವಿಸಿದರು. ಕ್ಷೇತ್ರದ ವ್ಯವಸ್ಥಾಪಕ ಸೀತಾರಾಮ ಬಳ್ಳುಳ್ಳಾಯರು ಫಲಾರ್ಪಣೆ ಮಾಡಿ ರಾಘವೇಂದ್ರ ಉಡುಪುಮೂಲೆ ಅವರು ಗೌರವ ಫಲಕವನ್ನೂ ಮುರಳಿಕೃಷ್ಣ ಸ್ಕಂದ ಅವರು ಸ್ಮರಣಿಕೆಯನ್ನೂ ನೀಡಿ ಪುರಸ್ಕರಿಸಿದರು. ಕೃಷ್ಣ ಭಟ್ ಅಡ್ಕ ಮಾನ್ಯ ಅವರನ್ನು ಅಭಿನಂದಿಸಿ ಮಾತನಾಡಿದರು. ಗೋವಿಂದ ಬಳ್ಳಮೂಲೆ ಸ್ವಾಗತಿಸಿ, ಡಾ. ಶಿವಕುಮಾರ್ ಅಡ್ಕ ವಂದಿಸಿದರು.
ಬಳಿಕ ಸಂತೋಷ್ ಮಾನ್ಯ ಹಾಗೂ ಬಳಗದವರಿಂದ ಸಂಕಯ್ಯ ಭಾಗವತ ವಿರಚಿತ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಬಯಲಾಟ ಸಂಪನ್ನವಾಯಿತು. ಕಲಾವಿದರಾಗಿ ಹಿಮ್ಮೇಳದಲ್ಲಿ ತಲ್ಪಣಾಜೆ ವೆಂಕಟ್ರಮಣ ಭಟ್, ಲಕ್ಷ್ಮೀನಾರಾಯಣ ಅಡೂರು, ಶ್ರೀಧರ ಪಡ್ರೆ, ಲೋಕೇಶ್ ಮುಳಿಯಾರು ಹಾಗೂ ಮುಮ್ಮೇಳದಲ್ಲಿ ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ಅರುಣ್ ಕೋಟ್ಯಾನ್, ಸಂತೋಷಕುಮಾರ್ ಮಾನ್ಯ , ಶಿವಾನಂದ ಪೆರ್ಲ, ಮಹೇಶ್ ಮಣಿಯಾಣಿ, ಶಬರೀಶ ಮಾನ್ಯ, ಸುಕೇಶ ಏಳ್ಕಾನ, ಬಾಲಚಂದ್ರ ಬಂಟ್ರಡ್ಕ, ಯತಿಕಾ ಬದಿಯಡ್ಕ ಭಾಗವಹಿಸಿದರು. ರಾಕೇಶ್ ಗೋಳಿಯಡ್ಕ ಹಾಗೂ ಬಳಗದವರು ವಸ್ತ್ರಾಲಂಕಾರದಲ್ಲಿ ಸಹಕರಿಸಿದರು.

