ಬದಿಯಡ್ಕ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತಿ ಕ್ಷೇತ್ರ ಪಳ್ಳತ್ತಡ್ಕ ಪ್ರಾದೇಶಿಕ ಸಮಿತಿಯ ಮಹಾಸಭೆ ಇತ್ತೀಚೆಗೆ ಇಲ್ಲಿನ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಜರಗಿತು.
ಕ್ಷೇತ್ರ ಆಡಳಿತ ಸಮಿತಿ ಉಪಾಧ್ಯಕ್ಷ ರಾಮ ಚೊಟ್ಟತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಉಪದೇಶಕ ರಾಮ ಮಾಸ್ತರ್ ಇಕ್ಕೇರಿ ಉದ್ಘಾಟಿಸಿದರು. ಕ್ಷೇತ್ರ ಪದಾಧಿಕಾರಿಗಳಾದ ವಸಂತ ಚೇಂಬೋಡು, ಪ್ರಸಾದ ಕಡುಂಬು, ಸದಾಶಿವ ಮೈಲುತೊಟ್ಟಿ, ರಾಜೇಶ್ ಪೆÇಡಿಪ್ಪಳ್ಳ, ಅಶೋಕ ಭಂಡಾರ ಮನೆ, ಅಕ್ಷತಾ ಇಕ್ಕೇರಿ, ಜನಾರ್ದನ ಮೊದಲಾದವರು ಮಾತನಾಡಿದರು. ಗಂಗಾಧರ ಪಳ್ಳತ್ತಡ್ಕ ಸ್ವಾಗತಿಸಿ, ರಾಧಾಕೃಷ್ಣ ವಂದಿಸಿದರು. ರಾಮ ಪಳ್ಳತ್ತಡ್ಕ, ದೇವದಾಸ ಚೊಟ್ಟತ್ತಡ್ಜ, ಶನೋಜ್, ಉಷಾ, ಸ್ವಾತಿ ಮೊದಲಾದವರ ನೇತೃತ್ವ ವಹಿಸಿದ್ದರು.

