ಕಾಸರಗೋಡು: ಶ್ರೀನಾರಾಯಣ ಧರ್ಮ ಪರಿಪಾಲನಂ(ಎಸ್‍ಎನ್‍ಡಿಪಿ)ಕೂಡ್ಲು ಶಾಖೆ ವತಿಯಿಂದ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ಜರುಗಿತು. ಮಧೂರು ಗ್ರಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಕೆ. ಗೋಪಾಲಕೃಷ್ಣ, ಸ್ಥಾಯೀ ಸಮಿತಿ ಅಧ್ಯಕ್ಷೆ ಜನನಿ ಅನಿಲ್‍ಕುಮಾರ್, ಗ್ರಾಪಂ ಸದಸ್ಯೆ ಸ್ಮಿತಾ ಸುಧಾಕರನ್ ಅವರಿಗೆ ಸ್ವಾಗತ ಹಾಗೂ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಪೆರಿಯ ಕ್ಯಾಂಪಸ್‍ನಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ ರ್ಯಾಂಕ್ ವಿಜೇತೆ ಎಸ್. ವಿಜಿತಾ ಅವರಿಗೆ ಅಭಿನಂದನಾ ಸಮಾರಂಭ ನಡೆಯಿತು.
ಎಸ್‍ಎನ್‍ಡಿಪಿ ಜಿಲ್ಲಾ ಘಟಕ ಕಾರ್ಯದರ್ಶಿ ಗಣೇಶ್ ಪಾರಕಟ್ಟ ಉದ್ಘಾಟಿಸಿದರು. ಕೂಡ್ಲು ಶಾಖಾ ಅಧ್ಯಕ್ಷ ಕೃಷ್ಣನ್ ಕೂಡ್ಲು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅವರು ವಿಜಿತಾ ಅವರನ್ನು ಸ್ಮರಣಿಕೆ ನೀಡಿ ಅಭಿನಂದಿಸಿದರು. ಘಟಕ ಉಪಾಧ್ಯಕ್ಷ ಎ.ಟಿ ವಿಜಯನ್ ಅಧ್ಯಕ್ಷತೆ ವಹಿಸಿದ್ದರು. ಶಾಖಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

